ಶ್ರೀ ಕೃಷ್ಣನ ಜೀವನ ಸರ್ವಕಾಲಕ್ಕೂ ಅನುಕರಣೀಯ: ರಾಘವೇಂದ್ರ ಪ್ರಭು

Update: 2019-08-24 17:06 GMT

ಉಪ್ಪಿನಂಗಡಿ: ಶ್ರೀ ಕೃಷ್ಣನ ಬಾಲ್ಯದಿಂದ ಮೊದಲುಗೊಂಡು ಜೀವನ ಪರ್ಯಂತದ ಬದುಕು ಸರ್ವ ಕಾಲಕ್ಕೂ ಅನುಕರಣೀಯವಾಗಿದೆ ಎಂದು ಉದ್ಯಮಿ ರಾಘವೇಂದ್ರ ಪ್ರಭು ತಿಳಿಸಿದರು. 

ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಗೀತಾಲಕ್ಷ್ಮೀ ತಾಳ್ತಜೆ ಮಾತನಾಡಿ, ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಉಲ್ಲೇಖಿಸಿದಂತೆ, `ಅಧರ್ಮ ತಾಂಡವವಾಡಿದಾಗ ನಾನು ಮತ್ತೆ ಮತ್ತೆ ಅವತರಿಸುವೆನು" ಎಂಬಂತೆ ಭರತ ಭೂಮಿಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ಆ ಮಾತನನ್ನು ನಿಜವಾಗಿಸಿದಂತಿದೆ ಎಂದರು.

ಶ್ರೀ  ಕೃಷ್ಣ ಜನ್ಮಾಷ್ಠಮಿ ಉತ್ಸವವನ್ನು ಶ್ರೀಮತಿ ಶೋಭಾ ಗಣೇಶ್ ಭಟ್  ಉದ್ಘಾಟಿಸಿದರು. ಉತ್ಸವದ ಅಂಗವಾಗಿ ಶ್ರೀ ಕೃಷ್ಣನ ತೊಟ್ಟಿಲು ತೂಗುವಿಕೆಯಲ್ಲಿ ವರುಣ್ ಹಾಗೂ ಅಶ್ವಿತಾ ದಂಪತಿಯ ಮಗು  ಪ್ರೀತೇಶ್ ನನ್ನು ತೊಟ್ಟಿಲು ತೂಗಿ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ನೂರಕ್ಕೂ ಮಿಕ್ಕಿದ ಶ್ರೀಕೃಷ್ಣ - ರಾಧಾ  ವೇಷಧಾರಿ ಮಕ್ಕಳಿಂದ ಮಡಿಕೆ ಒಡೆಯುವ ಕಾರ್ಯಕ್ರಮ ಜರುಗಿತು. ಹಾಗೂ ಸಾರ್ವಜನಿಕರಿಗೆ ಮಡಿಕೆ ಒಡೆಯುವ ಸ್ಪರ್ಧೆಯನ್ನು ನಡೆಸಲಾಯಿತು. 

ಕಾರ್ಯಕ್ರಮದಲ್ಲಿ ಶಿಶು ಮಂದಿರದ ಅಧ್ಯಕ್ಷ  ಮನೋಜ್ ಶೆಟ್ಟಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಎನ್. ಉಮೇಶ್ ಶೆಣೈ, ,  ಸುಜಾತ ಕೃಷ್ಣ ಆಚಾರ್ಯ, ಮಹೇಶ್ ಕಿಣಿ, ಹರಿರಾಮಚಂದ್ರ, ಸುಬ್ರಹ್ಮಣ್ಯ ಶೆಣೈ, ರಾಮಚಂದ್ರ ಮಣಿಯಾಣಿ, ರಾಜೇಶ್ ಪೈ, ಅಶೋಕ್ ಕುಮಾರ್ ರೈ ನೆಕ್ಕರೆ, ಸಂದೀಪ್ ಭಟ್, ಚಂದ್ರಶೇಖರ್ ಮಡಿವಾಳ, ಜಯಶ್ರೀ ಜನಾರ್ದನ್, ಸುಮನ್ ಪಿ. ಲದ್ವಾ, ಸದಾನಂದ್ ಬಿರಾದಾರ್, ಜಗದೀಶ್ ಶೆಟ್ಟಿ, ಕಿಶೋರ್, ಯತೀಶ್ ಶೆಟ್ಟಿ, ಶ್ಯಾಮಲಾ ಶೆಣೈ, ಮತ್ತಿತರರು ಭಾಗವಹಿಸಿದರು. ಜಯಂತಿ ಸ್ವಾಗತಿಸಿದರು. ಯೋಗಿತಾ ವಂದಿಸಿದರು. ಶಿಕ್ಷಕಿ ಆರತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News