×
Ad

ಕೊಟ್ಟಾರ ಚೌಕಿ ರಸ್ತೆಯಲ್ಲಿ ಕೃತಕ ನೆರೆ: ಅಂಗಡಿಗಳಿಗೆ ನುಗ್ಗಿದ ನೀರು

Update: 2019-08-26 15:43 IST

ಮಂಗಳೂರು, ಆ. 26: ಸೋಮವಾರ ಮಧ್ಯಾಹ್ನದ ಬಳಿಕ ಮಳೆಗೆ ನಗರದ ಹಲವು ಕಡೆ ರಸ್ತೆಯಲ್ಲೇ ನೀರು ಹರಿದಿದೆ, ಅಂಗಡಿ ಮುಂಗಟ್ಟಿಗೆ ನೀರು ನುಗ್ಗಿವೆ.

ಕೊಟ್ಟಾರ ಚೌಕಿಯಲ್ಲಿ ರಸ್ತೆಯು ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿದ್ದು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಅಲ್ಲದೆ ಈ ಭಾಗದ 
ರಾಜಕಾಲುವೆಗಳ ಹೂಳೆತ್ತದ ಕಾರಣ ಎರಡೂ ಬದಿಯ ಕೆಲವು ಅಂಗಡಿಗಳಿಗೆ ನೀರು ನುಗ್ಗಿವೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ನಗರದ ಸುಲ್ತಾನ ಬತ್ತೇರಿಯಲ್ಲೂ ನೀರು ಕೆಲವು ಮನೆಗಳ ಅಂಗಳ ದಾಟಿವೆ. ಮಠದ ಕಣಿಯಲ್ಲಿರುವ 4 ಮನೆಗಳು ಕೂಡ ಅಪಾಯದಲ್ಲಿವೆ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News