ಕೊಣಾಜೆ: ಚಿನ್ನದ ಅಂಗಡಿ, ಫೈನಾನ್ಸ್ ಮಾಲಕ ನಾಪತ್ತೆ
Update: 2019-08-26 16:07 IST
ಕೊಣಾಜೆ: ಚಿನ್ನದ ಅಂಗಡಿ ಹಾಗೂ ಫೈನಾನ್ಸ್ ಮಾಲಕ ಪ್ರಭಾಕರ ಆಚಾರ್ಯ (57) ಎಂಬವರು ಕಳೆದ ಎರಡು ದಿನಗಳಿಂದ ನಾಪತ್ತೆಯಾ ಗಿದ್ದು, ಈ ಬಗ್ಗೆ ಅವರ ಪುತ್ರ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಪ್ರಭಾಕರ ಆಚಾರ್ಯ ಅವರು ಬೋಳಿಯಾರ್ ನಲ್ಲಿ ಪ್ರಭಾ ಜ್ಯುವೆಲ್ಲರ್ಸ್ ಚಿನ್ನದ ಅಂಗಡಿ ಹಾಗೂ ಪ್ರಭಾ ಪೈನಾನ್ಸ್ ನಡೆಸುತ್ತಿದ್ದರು. ಕಳೆದ ಹಲವಾರು ವರ್ಷ ದಿಂದ ಈ ಉದ್ಯಮವನ್ನೇ ನಡೆಸುಕೊಂಡು ಬಂದಿದ್ದಾರೆ. ರವಿವಾರ ಮಧ್ಯಾಹ್ನ ಪತ್ನಿ ಪೂರ್ಣಿಮ ಅವರಲ್ಲಿ ಔಷಧಿ ತರಲೆಂದು ಹೇಳಿ ತೆರಳಿದವರು ಮತ್ತೆ ವಾಪಸ್ಸು ಬಂದಿರಲಿಲ್ಲ. ಬಳಿಕ ಮನೆಯವರು ಹುಡುಕಿದರೂ ಅವರು ಸಿಗಲಿಲ್ಲ ಹಾಗೂ ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು. ಬಳಿಕ ಪುತ್ರ ಪ್ರಣಾಮ್ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.