×
Ad

ಹುಲಿವೇಷ ಸ್ಪರ್ಧೆ: ಕಾಡಬೆಟ್ಟು- ಬೈಲೂರು ತಂಡಕ್ಕೆ ಪ್ರಥಮ ಪ್ರಶಸ್ತಿ

Update: 2019-08-26 19:55 IST

ಉಡುಪಿ, ಆ.26: ಕಾಡಬೆಟ್ಟು ಅಶೋಕ್‌ರಾಜ್ ಬಳಗದ ರಜತ ಮಹೋತ್ಸವದ ಅಂಗವಾಗಿ ಬ್ರಹ್ಮಗಿರಿ ಸರ್ಕಲ್ ಬಳಿ ಆ.23ರಂದು ಏರ್ಪಡಿಸ ಲಾದ ‘ಹುಲಿ ಘರ್ಜನೆ- 2019’ ಹುಲಿವೇಷ ಸ್ಪರ್ಧೆಯಲ್ಲಿ ಸುರೇಂದ್ರ ಕಾಡ ಬೆಟ್ಟು ಬಳಗ ಮತ್ತು ಬೈಲೂರು ಇಷ್ಟ ಮಹಾಲಿಂಗೇಶ್ವರ ಮತ್ತು ಬಳಗ ಪ್ರಥಮ ಬಹುಮಾನ ಗೆದ್ದುಕೊಂಡಿದೆ.

ಮಾರ್ಪಳ್ಳಿ ಚಂಡೆ ಬಳಗ ದ್ವಿತೀಯ, ಕೊರಂಗ್ರಪಾಡಿ ಜ್ಯೂನಿಯರ್ ಬಾಯ್ಸ್ಸಿ ತೃತೀಯ ಬಹುಮಾನವನ್ನು ಪಡೆಯಿತು. ಕಾಡಬೆಟ್ಟು ಬಳಗದ ಧನು ಅಕ್ಕಿ ಮುಡಿ ಎಸೆತ, ಜ್ಯೂನಿಯರ್ ಬಾಯ್ಸಿನ ವೃದ್ಧಿಕ್ ಮರಕಾಲು, ಇಷ್ಟ ಮಹಾ ಲಿಂಗೇಶ್ವರ ಬಳಗದ ಸುಹೀರ್ ವೈಯಕ್ತಿಕ ಕುಣಿತ ಪ್ರಶಸ್ತಿಯನ್ನು ಪಡೆದರು. ಸ್ಪರ್ಧೆಯನ್ನು ಅಜ್ಜರಕಾಡು ವಾರ್ಡಿನ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಉದ್ಘಾಟಿಸಿದರು.

ವೇದಿಕೆಯಲ್ಲಿ ಉದ್ಯಮಿ ರಂಜನ್ ಕಲ್ಕೂರ, ರಾಹುಲ್ ಬೆಂಗಳೂರು, ಗಣೇಶ್‌ರಾಜ್ ಸರಳೇಬೆಟ್ಟು, ಅಶೋಕ್‌ರಾಜ್ ಮೊದಲಾದ ವರು ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಅಂತಾರಾಷ್ಟ್ರೀಯ ಮಟ್ಟದ ದೇಹದಾರ್ಢ್ಯಪಟು ನಿಶಾಂತ್ ಕುಮಾರ್, ನಾದಸ್ವರ ವಾದಕ ಪಾಂಡು ಶೇರಿಗಾರ್, ಮಹಿಳಾ ಹುಲಿವೇಷ ತಂಡದ ನಾಯಕಿ ಲಯನ್ ಅಧ್ಯಕ್ಷೆ ವಿದ್ಯಾ ಉದಯ ಶೆಟ್ಟಿ ತೀರ್ಪು ಗಾರರಾಗಿ ಸಹಕರಿಸಿದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ್ ಬಾಬು, ಉದ್ಯಮಿಗಳಾದ ರಂಜನ್ ಕಲ್ಕೂರ, ರಾಹುಲ್ ಬೆಂಗಳೂರು, ಸಂಜೀವ ಬಳ್ಕೂರು, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News