×
Ad

ಆ.28ರಿಂದ ‘ಸ್ಪೆಕ್ಟ್ರಮ್’ ಛಾಯಾಚಿತ್ರ ಪ್ರದರ್ಶನ

Update: 2019-08-26 19:59 IST

ಉಡುಪಿ, ಆ.26: ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಫೋಕಸ್ ರಾಘು ಅವರ ಛಾಯಾಚಿತ್ರ ಪ್ರದರ್ಶನ ‘ಸ್ಪೆಕ್ಟ್ರಮ್’ ಆ.28ರಿಂದ ಸೆ.1ರವರೆಗೆ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.

ಐದು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ನಡೆಯಲಿದ್ದು, ಇದರಲ್ಲಿ ಕಾಶ್ಮೀರ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ತೆಗೆದ ಲ್ಯಾಂಡ್‌ಸ್ಕೇಪ್, ವೈಲ್ಡ್‌ಲೈಫ್, ಸಂಸ್ಕೃತಿ, ಲೈಫ್‌ಸ್ಟೈಲ್ ಸೇರಿದಂತೆ ವಿವಿಧ ಬಗೆಯ ಸುಮಾರು 45 ಛಾಯಾ ಚಿತ್ರಗಳನ್ನು ಪ್ರದರ್ಶಿಸ ಲಾಗುವುದು ಎಂದು ಫೋಕಸ್ ರಾಘು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರದರ್ಶನವನ್ನು 28ರಂದು ಬೆಳಿಗ್ಗೆ 10 ಗಂಟೆಗೆ ಫೋಕಸ್ ರಾಘು ಅವರ ತಾಯಿ ರತ್ನಾವತಿ ಉದ್ಘಾಟಿಸಲಿರುವರು. ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ, ನಿಕೋನ್ ಇಂಡಿಯಾದ ಆರ್.ಎಸ್.ಎಂ. ರಾಜಶೇಖರ್ ಎನ್., ಛಾಯಾಗ್ರಾಹಕ ಗುರುದತ್ ಕಾಮತ್ ಭಾಗವಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ವಿಜಯ, ಉಪನ್ಯಾಸ ಕರಾದ ಮಂಜುನಾಥ್ ಕಾಮತ್, ಸುಜಿತ್ ಕೋಟ್ಯಾನ್, ವಿನೀತ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News