×
Ad

ಉಡುಪಿ ಜಿಲ್ಲಾ ಮದನೀಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ

Update: 2019-08-26 20:09 IST

ಉಡುಪಿ, ಆ.26: ಉಳ್ಳಾಲ ಸಯ್ಯಿದ್ ಮದನಿ ಅರಬಿ ಕಾಲೇಜಿನ ಪದವಿ (ಬಿರುದು) ದಾರಿಗಳ ಸಂಘಟನೆಯಾದ ಕೇಂದ್ರ ಮದನೀಸ್ ಅಸೋಸಿ ಯೇಷನ್ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸಮಿತಿಯನ್ನು ಇತ್ತೀಚೆಗೆ ಉಡುಪಿ ಅಜ್ಜರಕಾಡಿನಲ್ಲಿ ರಚಿಸಲಾಯಿತು.

ಕೇಂದ್ರ ಸಮಿತಿ ಅಧ್ಯಕ್ಷ ಅಸ್ಯಯ್ಯಿದ್ ಅಬೂಬಕ್ಕರ್ ಸಿದ್ದೀಖ್ ತಂಙಳ್ ಅಲ್ ಮದನಿ ತೀರ್ಥಹಳ್ಳಿ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಜಮಾ ಅತ್ ಸಂಚಾಲಕ ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಸಭೆಯನ್ನು ಉದ್ಘಾಟಿಸಿ ದರು. ಕೇಂದ್ರ ಸಮಿತಿಯ ಆರ್.ಕೆ.ಮದನಿ ಅಮ್ಮೆಂಬಳ ಪ್ರಾಸ್ತಾವಿಕ ಭಾಷಣ ಮಾಡಿದರು.

ಉಳ್ಳಾಲ ದರ್ಗಾ ಸಮಿತಿಯ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಜಲಾಲುದ್ದೀನ್ ಮದನಿ ಉಳ್ಳಾಲ ಉಪಸ್ಥಿತರಿದ್ದರು. 2019-20 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆರಿಸಲಾಯಿತು.

ಅದ್ಯಕ್ಷರಾಗಿ ಸಯ್ಯಿದ್ ಅಲವಿ ತಂಙಳ್ ಹೊನ್ನಾವರ ಕರ್ಕಿ, ಕಾರ್ಯಾಧ್ಯಕ್ಷ ರಾಗಿ ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ಯಾಗಿ ನೌಫಲ್ ಮದನಿ ನೇಜಾರ್, ಕೋಶಾಧಿಕಾರಿಯಾಗಿ ಬಶೀರ್ ಮದನಿ ಕನ್ನಾಂಗರ್, ಉಪಾಧ್ಯಕ್ಷರುಗಳಾಗಿ ಶರೀಫ್ ಮದನಿ ಹೊಸ್ಮಾರ್, ಅಬ್ದುಲ್ ಹಮೀದ್ ಮದನಿ ರಂಗನಕೆರೆ, ಕಾರ್ಯದರ್ಶಿಗಳಾಗಿ ಹಾಫಿಳ್ ಹಾರಿಸ್ ಮದನಿ ಕನ್ನಂಗಾರ್, ಇಬ್ರಾಹಿಂ ಮದನಿ ಮೂಳೂರು, ಸಂಘಟನಾ ಕಾರ್ಯ ದರ್ಶಿಯಾಗಿ ಅಬ್ದುಲ್ ಖಾದರ್ ಮದನಿ ಹೊನ್ನಾವರ, ಮೀಡಿಯಾ ಕಾರ್ಯ ದರ್ಶಿಯಾಗಿ ಸಮದ್ ಮದನಿ ಸಾಸ್ತನ ಹಾಗೂ 16 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News