ವೈಟ್ ಡೌಸ್ ಸಂಸ್ಥೆಯಲ್ಲಿ ಮುಹಮ್ಮದ್ ಬದ್ರುದ್ದೀನ್ ಪುಣ್ಯಸ್ಮರಣೆ
ಮಂಗಳೂರು, ಆ.26: ಮಾಜಿ ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮುಹಮ್ಮದ್ ಬದ್ರುದ್ದೀನ್ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮವು ನಗರದ ವೈಟ್ ಡೌಸ್ ಸಂಸ್ಥೆಯಲ್ಲಿ ರವಿವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಜೆ.ಆರ್.ಲೋಬೊ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತ್ತು ಸಕ್ರಿಯ ನಾಯಕರಗಿದ್ದ ಮುಹಮ್ಮದ್ ಬದ್ರುದ್ದೀನ್ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಅಪಾರವಾಗಿ ಶ್ರಮಿಸಿದ್ದರು. ಬದ್ರುದ್ದೀನ್ ಎಂದೂ ಕೂಡ ತನ್ನ ಕುಟುಂಬಕ್ಕಾಗಿ ಕಾಂಗ್ರೆಸ್‌ನಲ್ಲಿ ದುಡಿದಿಲ್ಲ. ಸಮಾಜದ ಹಿತಕ್ಕಾಗಿ, ಸಮಾಜದ ಸೇವೆಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದರು ಎಂದರು.
ಈ ಸಂದರ್ಭ ವೈಟ್ ಡೌಸ್ ಸಂಸ್ಥೆಯ ಸ್ಥಾಪಕ ಕೊರಿನ್ ರಸ್ಕಿನ್ಹಾ, ವೈಟಸ್ ರಸ್ಕಿನ್ಹಾ, ಮುಹಮ್ಮದ್ ಬದ್ರುದ್ದೀನ್‌ರ ಪತ್ನಿ ಪ್ರೀಡಾ ಮುಹಮ್ಮದ್, ಪುತ್ರಿ ಸುಝಾನ್ ಮುಹಮ್ಮದ್, ಮಾಜಿ ಮೇಯರ್ ಮಹಾಬಲ ಮಾರ್ಲ, ಮಾಜಿ ಕಾರ್ಪೊರೇಟರ್‌ಗಳಾದ ಪ್ರಕಾಶ್ ಬಿ, ಕೇಶವ ಮರೋಳಿ, ಶೈಲಜಾ, ಸಬಿತಾ ಮಿಸ್ಕಿತ್, ಆಶಾ ಡಿಸಿಲ್ವಾ, ಪ್ರವೀಣ್ ಆಳ್ವ, ಎ.ಸಿ.ವಿನಯರಾಜ್, ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ಶಾಂತಲಾ ಗಟ್ಟಿ, ಶೈಲಜಾ, ಆಶಾ ಡಿಸಿಲ್ವ, ಕೇಶವ ಮರೋಳಿ, ಪ್ರಭಾಕರ ಶ್ರೀಯಾನ್, ಕುಂಞಾಮು, ಅಶ್ರಫ್, ಡೆನ್ನಿಸ್ ಡಿಸಿಲ್ವ, ಟಿ.ಕೆ. ಸುಧೀರ್, ನೀರಜ್‌ಪಾಲ್, ಶೋಭಾ ಕೇಶವ, ನೆಲ್ಸನ್ ಮೊಂತೆರೋ, ಉದಯ ಕುಂದರ್, ಜಯ ಕುಕ್ಯಾನ್, ಹೆನ್ರಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.