ಮಳೆ-ನೆರೆ ಸಂತೃಸ್ತರಿಗೆ ಪಾವೂರು ಗ್ರಾಮಸ್ಥರಿಂದ ನೆರವು
ಮಂಗಳೂರು, ಆ.26: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಸಂತೃಸ್ತರಾದ ಬೆಳ್ತಂಗಡಿ ತಾಲೂಕಿನ ಹಲವು ಕುಟುಂಬಸ್ಥರಿಗೆ ಪಾವೂರು ಗ್ರಾಮದ ನಾಗರಿಕರು ಯಾದ್ ಫೌಂಡೇಶನ್ ಸಂಸ್ಥೆಯ ಸಹಕಾರದೊಂದಿಗೆ ಸಂಗ್ರಹಿಸಿದ ಆಹಾರ ಸಹಿತ ಅಗತ್ಯ ಸಾಮಗ್ರಿಗಳನ್ನು ರವಿವಾರ ವಿತರಿಸಿದರು.
ಪಾವೂರು ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್‌ರ ನೇತೃತ್ವದಲ್ಲಿ ಮಲಾರ್‌ನ ಯಾದ್ ಫೌಂಡೇಶನ್‌ನ ಸಹಕಾರದಿಂದ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಸಂಗ್ರಹಿಸಲ್ಪಟ್ಟ ಸಾಮಗ್ರಿಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ವಿವೇಕ್ ರೈ,ಎಂ.ಪಿ.ಹಸನ್, ಯಾದ್ ಫೌಂಡೇಶನ್ ಅಧ್ಯಕ್ಷ ರಿಯಾಝ್ ಅಹ್ಮದ್ ಪಾವೂರು, ಜೊತೆ ಕಾರ್ಯದರ್ಶಿ ಹನೀಫ್ ಕೆ.ಎಂ.,ಗೌರವ ಸಲಹೆಗಾರ ಹನೀಫ್ ಪಿ., ಸಂಘಟನಾ ಕಾರ್ಯದರ್ಶಿಗಳಾದ ಇರ್ಫಾನ್ ಮಲಾರ್, ಹನೀಫ್ ಕುಂಜತ್ತೂರು, ನಿಯಾಝ್ ಮಲಾರ್, ಅಲ್ತಾಫ್ ಹಾಮದ್, ರಿಯಾಝ್ ಬದ್ರಿಯಾ ನಗರ, ಆರಿಫ್ ಕೋಡಿಕಲ್, ನೌಷಾದ್ ಎಂ.ಆರ್., ರಿಯಾಝ್ ಎನ್., ರಹೀಂ ಅಕ್ಷರ ನಗರ, ನಿಝಾಮ್ ಮಲಾರ್, ಉದ್ಯಮಿ ವಿನ್ಸೆಂಟ್ ಲೋಬೋ, ಜೆರಾಲ್ಡ್ ಬ್ರಾಗ್ಸ್, ಭರತ್ ರಾಜ್, ಸದಾಶಿವಣ್ಣ ಉಪಸ್ಥಿತರಿದ್ದರು.
ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ ಟೆಕ್ನಾಲಜಿಯ ಸಫ್ವಾನ್‌ರ ಸಹಕಾರದಿಂದ ಸಂಸ್ಥೆಯ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ನೆರವಿನಿಂದ ಪರಿಹಾರ ಕೇಂದ್ರಕ್ಕೆ ಆರ್ಥಿಕ ನೆರವು ನೀಡಲಾಯಿತು.