ಮಂದಾರ ತ್ಯಾಜ್ಯ ದುರಂತದ ಸಂತ್ರಸ್ತರಿಗೆ ನೆರವು
Update: 2019-08-26 20:31 IST
ಮಂಗಳೂರು, ಆ.26: ಮಂದಾರ ತ್ಯಾಜ್ಯ ದುರಂತದಲ್ಲಿ ಸಂತ್ರಸ್ತರಾಗಿ ಕುಲಶೇಖರದ ಕರ್ನಾಟಕ ಗೃಹ ಮಂಡಳಿಯ ವಸತಿ ಸಂಕಿರಣದಲ್ಲಿ ವಾಸವಿರುವ 27 ನಿರಾಶ್ರಿತರ ಕುಟುಂಬಸ್ಥರಿಗೆ ಕರ್ನಾಟಕ ಗೃಹ ಮಂಡಳಿಯ ಮಾಲಕರ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಕುಟುಂಬ ಸಮೇತರಾಗಿ ರವಿವಾರ 1 ಲಕ್ಷಕ್ಕೂ ಅಧಿಕ ಬೆಲೆಯ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭ ಮಂದಾರ ರಾಜೇಶ್ ಭಟ್ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಮಾಜಿ ಮೇಯರ್ ಭಾಸ್ಕರ ಕೆ. ಕೆಎಚ್‌ಬಿ ಮಾಲಕರ ಸಂಘದ ಅಧ್ಯಕ್ಷ ಜನಾರ್ದನ ಬಾಬು, ಕಾರ್ಯದರ್ಶಿ ಎಂ.ರವಿ, ಸದಸ್ಯರಾದ ಮೆಲ್ವಿನ್ ಡಿಸೋಜ, ರಾಜೇಶ್ ವೇಗಸ್, ಪ್ರಸಾದ್ ಸುವರ್ಣ, ರೋಹನ್ ಮಥಾಯಿಸ್, ವನಿತಾ, ವಿನೂತಾ, ಗಂಗಾಧರ ನಾಯಕ್,ಅನು ರಾಕೇಶ್, ಜಗದೀಶ್, ಪವಿತ್ರಾ, ರಾಜೇಂದ್ರ ಕುಮಾರ್, ವನಜಾ, ಶೀಲಾ ಮಹೇಶ್, ಎಲೆನ್ ಲೋಬೋ, ಲಿಝಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.