×
Ad

ಉಡುಪಿ: ಪ್ರಾಕೃತಿಕ ವಿಕೋಪದಡಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ

Update: 2019-08-26 22:06 IST

ಉಡುಪಿ, ಆ.26: ಮೂಡನಿಡಂಬೂರು, ಅಂಬಲಪಾಡಿ, ಹೆರ್ಗ, ಶಿವಳ್ಳಿ, 76 ಬಡಗಬೆಟ್ಟು, ಪುತ್ತೂರು ಗ್ರಾಮಗಳಿಗೆ ಸಂಬಂಧಪಟ್ಟ 29 ಫಲಾನುಭವಿ ಗಳಿಗೆ ಪ್ರಾಕೃತಿಕ ವಿಕೋಪದಡಿ 10,80,200 ರೂ. ಮೊತ್ತದ ಪರಿಹಾರದ ಚೆಕ್ಕನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸೋಮವಾರ ಉಡುಪಿ ತಾಪಂ ಸಭಾಂಗಣದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ನಗರಸಭಾ ಸದಸ್ಯರಾದ ಗಿರೀಶ್, ಸಂತೋಷ್, ಅಂಬಲಪಾಡಿ ಗ್ರಾಪಂ ಅಧ್ಯಕ್ಷ ಪ್ರಮೋದ್ ಸಾಲ್ಯಾನ್, ಪ್ರಮುಖರಾದ ದಾವೂದ್ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಾವರ ಹೋಬಳಿ: ಬ್ರಹ್ಮಾವರ ಶಾಸಕರ ಕಚೇರಿಯಲ್ಲಿ ಹಾವಂಜೆ, ಹೇರೂರು, ಹಂದಾಡಿ, ಹೊಸೂರು, 34 ಕುದಿ, ಆರೂರು, ನೀಲಾವರ, ಚೇರ್ಕಾಡಿ, ಪೆಜಮಂಗೂರು ಗ್ರಾಮಗಳ 17 ಮಂದಿ ಫಲಾನುಭವಿಗಳಿಗೆ ಒಟ್ಟು 6,19,702 ಮೊತ್ತದ ಪರಿಹಾರದ ಚೆಕ್ಕನ್ನು ಶಾಸಕರು ನೀಡಿದರು.

ಉಪ್ಪೂರು, ಬೈಕಾಡಿ, ಹಾವಂಜೆ, ನಾಲ್ಕೂರು ಗ್ರಾಮದ ಏಳು ಮಂದಿ ಫಲಾನುಭವಿಗಳಿಗೆ 94 ಸಿಸಿ ಅಡಿಯಲ್ಲಿ ಹಕ್ಕುಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ, ತಾಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಆರೂರು ಗ್ರಾಪಂ ಅಧ್ಯಕ್ಷ ರಾಜೀವ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News