×
Ad

ಉಡುಪಿ: ರಿಕ್ಷಾ ಚಾಲಕರಿಗೆ ಸೂಚನೆ

Update: 2019-08-26 22:08 IST

ಉಡುಪಿ, ಆ. 26: ಜಿಲ್ಲೆಯಾದ್ಯಂತ ಅಟೋರಿಕ್ಷಾಗಳಲ್ಲಿ ಮೀಟರ್ ಅಳವಡಿಸುವಿಕೆ, ಸಾರ್ವಜನಿಕ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ಹಾಗೂ ಇನ್ನಿತರ ದೂರುಗಳು ಜಿಲ್ಲೆಯ ಅಟೋರಿಕ್ಷ ಚಾಲಕರು ಹಾಗೂ ಮಾಲಕರ ವಿರುದ್ಧ ಕೇಳಿಬರುತಿದ್ದು, ಜಿಲ್ಲೆಯ ಎಲ್ಲಾ ಅಟೋರಿಕ್ಷಾ ಚಾಲಕರು ಮತ್ತು ಮಾಲಕರು ಮೀಟರ್‌ನ್ನು ಕಡ್ಡಾಯವಾಗಿ ಅಳವಿಡಿಸಿ ಮೀಟರ್‌ನಲ್ಲಿ ನಿಗದಿಪಡಿಸಿದ ದರವನ್ನು ಪ್ರಯಾಣಿಕರಿಂದ ಪಡೆಯಬೇಕು. ಈ ಬಗ್ಗೆ ಇನ್ನು ದೂರುಗಳು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ. ರಾಮಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News