×
Ad

ವಂಚನೆ ಪ್ರಕರಣ: ಸ್ವರೂಪ್ ಶೆಟ್ಟಿಗೆ ನ್ಯಾಯಾಂಗ ಬಂಧನ

Update: 2019-08-26 22:09 IST

ಪಡುಬಿದ್ರೆ, ಆ.26: ಲಕ್ಷಾಂತರ ರೂ. ವಂಚನೆ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಮಣಿಪಾಲ ಅನಂತನಗರದ ಸ್ವರೂಪ್ ಎಂ.ಶೆಟ್ಟಿ (22)ಯನ್ನು ಪೊಲೀಸರು ಆ.25ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ ಸೆ. 6ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಡುಬಿದ್ರೆ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ನಿವಾಸಿ ಅಭಿಲಾಶ್ ಆಚಾರ್ಯ(23) ಎಂಬವರಿಗೆ 26ಲಕ್ಷ ರೂ. ವಂಚಿಸಿರುವ ಪ್ರಕರಣದಲ್ಲಿ ಸ್ವರೂಪ್ ಶೆಟ್ಟಿಯನ್ನು ಆ.16ರಂದು ಪಡುಬಿದ್ರಿ ಪೊಲೀಸ್ ಉಪ ನಿರೀಕ್ಷಕ ಸುಬ್ಬಣ್ಣ ನೇತೃತ್ವದ ತಂಡ ಬಂಧಿಸಿತ್ತು. ಆರೋಪಿಯನ್ನು ಎರಡು ಬಾರಿ ಒಟ್ಟು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News