ಅಪಘಾತ: ಬೈಕ್ ಸವಾರ ಮೃತ್ಯು
ಕೋಟ, ಆ.26: ಹುಣ್ಸೆಮಕ್ಕಿಯ ನಾಗಬನ ಎದುರು ಜಪ್ತಿ ಕ್ರಾಸ್ ರಸ್ತೆ ಬಳಿ ಆ.25ರಂದು ಸಂಜೆ ವೇಳೆ ಸ್ಕೂಟಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬಿದ್ಕಲ್‌ಕಟ್ಟೆ ಹುಣ್ಸೆಮಕ್ಕಿಯ ನಂದೀಶ(25) ಎಂದು ಗುರುತಿಸ ಲಾಗಿದೆ. ಅಪಘಾತದಿಂದ ಸ್ಕೂಟಿ ಸವಾರೆ ಸುಪ್ರೀತಾ ಎಂಬವರು ಗಾಯ ಗೊಂಡಿದ್ದಾರೆ. ಸುಪ್ರೀತಾ ಮಗುವನ್ನು ಕುಳ್ಳಿರಿಸಿಕೊಂಡು ಹಿರೋ ಡ್ಯೂಎಟ್ ಸ್ಕೂಟಿಯನ್ನು ಹುಣ್ಸೆಮಕ್ಕಿ ನಾಗಬನದ ಎದುರು ಜಪ್ತಿ ಕಡೆಗೆ ಹೋಗುವ ಕ್ರಾಸ್ ಬಳಿ ನಿರ್ಲಕ್ಷತನದಿಂದ ಮುಖ್ಯ ರಸ್ತೆಗೆ ಚಲಾಯಿಸಿದ ಪರಿಣಾಮ ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಬರುತ್ತಿದ್ದ ಅಪಾಚಿ ಬೈಕ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಬೈಕ್ ಸವಾರ ನಂದೀಶ್ ಗಂಬೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಸ್ಕೂಟಿಯಲ್ಲಿದ್ದ ಸಹ ಸವಾರ ಮಗುವಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.