×
Ad

ಮಂಗಳೂರು: ಹೈದರಾಬಾದ್‌ಗೆ ತೆರಳಿದ್ದ ವ್ಯಕ್ತಿ ನಾಪತ್ತೆ

Update: 2019-08-26 23:07 IST

ಮಂಗಳೂರು, ಆ.26: ಉದ್ಯೋಗಕ್ಕೆಂದು ಹೈದರಾಬಾದ್‌ಗೆ ತೆರಳಿದ್ದ ವ್ಯಕ್ತಿಯೋರ್ವ ನಾಪತ್ತೆಯಾಗಿದ್ದಾರೆ. ಕದ್ರಿ ಕಂಬಳ ನಿವಾಸಿ ಕೃಷ್ಣರಾಜ್ (45) ನಾಪತ್ತೆಯಾದ ವ್ಯಕ್ತಿ.

ಈತ ಏಳು ತಿಂಗಳ ಹಿಂದೆ ಕೆಲಸಕ್ಕೆ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ಹೈದರಾಬಾದ್‌ಗೆ ಹೋಗಿದ್ದರು. ನಂತರ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಪತ್ನಿ ದೂರು ನೀಡಿದ್ದಾರೆ.

ಚಹರೆ: 5.10 ಅಡಿ ಎತ್ತರ, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ಹಿಂದಿ, ತುಳು, ಬ್ಯಾರಿ ಭಾಷೆ ಮಾತನಾಡಬಲ್ಲರು. ಜೀನ್ಸ್ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದರು. ಈ ಚಹರೆಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆ (0824- 2220520) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News