ಸರಕಾರಕ್ಕೆ ಹೆಚ್ಚುವರಿ 1.76 ಲಕ್ಷ ಕೋಟಿ ರೂ. ವರ್ಗಾಯಿಸಲು ಆರ್‌ಬಿಐ ಸಮ್ಮತಿ

Update: 2019-08-26 17:48 GMT

ಮುಂಬೈ, ಆ. 26: ದೇಶದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸರಕಾರ ಅನುಕೂಲವಾಗುವ ನಿಟ್ಟಿನಿಂದ ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚುವರಿ 1.76 ಲಕ್ಷ ಕೋಟಿ ರೂ. ವನ್ನು ಸರಕಾರಕ್ಕೆ ವರ್ಗಾಯಿಸಲು ಸಮ್ಮತಿ ಸೂಚಿಸಿದೆ. 

ಆರ್‌ಬಿಐ ತನ್ನ ಬಳಿ ಲೆಕ್ಕಕ್ಕಿಂತ ಅಧಿಕ ಮೀಸಲು ಮೊತ್ತವನ್ನು ಹಿಡಿದಿಟ್ಟುಕೊಂಡಿದೆಯೇ ಎಂಬುದನ್ನು ಪರಿಶೀಲಿಸಲು ರಚಿಸಲಾಗಿದ್ದ ಬಿಮಲ್ ಜಲನ್ ಸಮಿತಿ, ಆರ್‌ಬಿಐ ಜೂನ್ 30ರಂದು ಕೊನೆಗೊಳ್ಳುವ ಬ್ಯಾಂಕ್‌ನ ವಿತ್ತೀಯ ವರ್ಷದಲ್ಲಿ ಸರಕಾರಕ್ಕೆ 1.76 ಲಕ್ಷ ಕೋಟಿ ರೂ. ವನ್ನು ವರ್ಗಾಯಿಸಬೇಕೆಂದು ಸಲಹೆ ನೀಡಿತ್ತು. ಈಗಾಗಲೇ 1.76 ಲಕ್ಷ ಕೋಟಿ ರೂ. ನಲ್ಲಿ ಈಗಾಗಲೇ 2800 ಕೋಟಿ ರೂ.ವನ್ನು ವರ್ಗಾಯಿಸಲಾಗಿದ್ದು, 1.48 ಲಕ್ಷ ಕೋಟಿ ರೂ. ವರ್ಗಾವಣೆಗೆ ಬಾಕಿ ಇದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಈ ಮೊತ್ತ ಆರ್‌ಬಿಐ ಹಿಂದಿನ ವರ್ಷ ಸರಕಾರಕ್ಕೆ ಪೂರೈಸಿದ 6,800 ಕೋಟಿ ರೂ.ಗಿಂತ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ರಿಸರ್ವ್ ಬ್ಯಾಂಕ್ ಯಾವುದೇ ತುರ್ತು ಹಣಕಾಸು ಅಗತ್ಯವನ್ನು ಪೂರೈಸಲು ತನ್ನ ಬಳಿ ಇರುವ ಒಟ್ಟು ಮೊತ್ತದ ಶೇ. 5.5ರಿಂದ 6.5ರನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ. ಈ ಕ್ರಮದಿಂದ ಉಂಟಾಗಬಹುದಾದ ಅಪಾಯದ ಪ್ರಮಾಣದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News