×
Ad

ಕಾಡಬೆಟ್ಟು ಟಿ.ಎ.ಪೈ ಮಾರ್ಡನ್ ಶಾಲಾ ವಿದ್ಯಾರ್ಥಿಗಳ ಸಾಧನೆ

Update: 2019-08-27 20:48 IST

ಉಡುಪಿ, ಆ.27: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಜ್ಜರಕಾಡು ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಧೆಯು ಉಡುಪಿ ಸಂತ್ ಸಿಸಿಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರಗಿತು.

ಉಡುಪಿ ಕಾಡಬೆಟ್ಟಿನ ಟಿ.ಎ. ಪೈ ಮಾರ್ಡನ್ ಶಾಲಾ ವಿದ್ಯಾರ್ಥಿಗಳು ರಸ ಪ್ರಶ್ನೆ(ಹಿರಿಯ -ಕಿರಿಯ), ಕ್ಲೇ ಮಾಡಲ್, ಕೋಲಾಟ, ತುಳು ಕಂಠಪಾಠ ಸ್ಫರ್ಧೆಗಳಲ್ಲಿ ಐದು ಪ್ರಥಮ ಬಹುಮಾನ ಗಳಿಸಿ ವಲಯ ಮಟ್ಟಕೆ ಆಯ್ಕೆಯಾಗಿ ದ್ದಾರೆ. ಇತರ ಸ್ಫರ್ಧೆಗಳಲ್ಲಿ ದ್ವಿತೀಯ 6 ಮತ್ತು ತೃತೀಯ 8 ಸೇರಿದಂತೆ ಒಟ್ಟು 19 ಬಹುಮಾನ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ರಮೇಶ ಶೆಣೈ, ಶಾಲಾ ಮುಖ್ಯೋ ಪಾಧ್ಯಾಯಿನಿ ಸಾವಿತ್ರಿ, ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News