ವಿಟ್ಲಪಿಂಡಿಯಲ್ಲಿ ಮಹಿಳೆಯ ಪರ್ಸ್ ಕಳವು
Update: 2019-08-27 21:59 IST
ಉಡುಪಿ, ಆ.27: ಉಡುಪಿ ಶ್ರೀಕೃಷ್ಣಮಠದ ರಥಬೀದಿಯಲ್ಲಿ ಆ.24 ರಂದು ನಡೆದ ವಿಟ್ಲಪಿಂಡಿ ಉತ್ಸವದಲ್ಲಿ ಪೊಲೀಸ್ ಸಿಬ್ಬಂದಿಯ ತಾಯಿಯ ಬ್ಯಾಗನ್ನು ಬ್ಲೇಡ್‌ನಿಂದ ಹರಿದು ಮೊಬೈಲ್ ಹಾಗೂ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಜಿಲ್ಲಾ ನಿಸ್ತಂತು ವಿಭಾಗದ ಮಹಾಂತೇಶ್ ನಾಯ್ಕ್ ಎಂಬವರ ತಾಯಿ ಶಿಲ್ಪಾಕೆ.ನಾಯ್ಕ ಎಂಬವರು ವಿಟ್ಲಪಿಂಡಿಯ ದಿನ ದೇವರ ದರ್ಶನಕ್ಕೆಂದು ಹೋಗಿದ್ದು, ಅಲ್ಲಿ ಕಳ್ಳರು, ಬ್ಲೇಡ್ ಉಪಯೋಗಿಸಿ ಅವರ ಬ್ಯಾಗ್ ಹರಿದು ಒಂದು ಪರ್ಸ್ ಹಾಗೂ ಮೊಬೈಲ್ ಮತ್ತು 1,300ರೂ. ನಗದು ಕಳವು ಮಾಡಿ ರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.