×
Ad

ಆ.30 ರಿಂದ ಪಾದುವಾ ಕಾಲೇಜಿನಲ್ಲಿ ಎರಡು ನಾಟಕ ಪ್ರದರ್ಶನ

Update: 2019-08-27 23:05 IST

ಮಂಗಳೂರು, ಆ. 27: ಕಳೆದ ಮೂರು ದಶಕಗಳ ಹಿಂದೆ ರೂಪುಗೊಂಡ ಆಯನ ಹವ್ಯಾಸಿ ನಾಟಕ ಸಂಸ್ಥೆ ಆ.30ಮತ್ತು 31ರಂದು ಸಂಜೆ 6.30 ಗಂಟೆಗೆ ಪಾದುವಾ ನಂತೂರು ಕಾಲೇಜಿನಲ್ಲಿ ಪದುವಾ ಕಾಲೇಜು ರಂಗ ವೇದಿಕೆಯಲ್ಲಿ ಪ್ರದರ್ಶನ ಗೊಳ್ಳಲಿದೆ.

ಮೊದಲ ದಿನ ಅಥೋಲ್ ಪ್ಯೂಗಾರ್ಡ್‌ರಚಿತ ‘ದಿ ಐಲ್ಯಾಂಡ್’ ನಾಟಕವನ್ನು ಎಸ್.ರಮೇಶ್‌ರಿಂದ ಕನ್ನಡ ರೂಪಾಂತರ ಗೊಂಡ ‘ದ್ವೀಪ ’ ನಾಟಕ ನಿಸಾಸಂ ಪದವೀಧರ ಹಾಗೂ ಸಿಂಗಾಪುರದಲ್ಲಿ ಇಂಟರ್ ಕಲ್ಚರಲ್ ಥಿಯೇಟರ್‌ನಲ್ಲಿ ವ್ಯಾಸಂಗ ನಡೆಸಿದ ಖ್ಯಾತ ನಟ,ನಿರ್ದೇಶಕ ಕೆ.ಪಿ.ಲಕ್ಷ್ಮಣ್ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಚಂದ್ರಹಾಸ ಉಳ್ಳಾಲ್ ಹಾಗೂ ಪ್ರಭಾಕರ್ ಕಾಪಿಕಾಡ್ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಎರಡನೆ ದಿನ ಆ. 31ರಂದು ಯೂಜಿನ್ ಐಯನೆಸ್ಕೋ ರಚಿತ ಅಸಂಗತ ನಾಟಕ ದಿ.ಲೀಡರ್ ಕೆ.ಪಿ.ಲಕ್ಷ್ಮಣ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಆಯನ ನಾಟಕದ ಮನೆ ತಂಡದ ಸಂಚಾಲಕ ಮೋಹನ್ ಚಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News