×
Ad

ಆದಿತ್ಯನಾಥ್ ಭೇಟಿ: ಉತ್ತರ ಪ್ರದೇಶದ ಆಸ್ಪತ್ರೆಯ ಹಾಸಿಗೆಯೂ ಕೇಸರಿಮಯ!

Update: 2019-08-27 23:17 IST

ರಾಯ್‌ಬರೇಲಿ,ಆ.27: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಯ್‌ಬರೇಲಿಯಲ್ಲಿರುವ ಜಿಲ್ಲಾಸ್ಪತ್ರೆಯ ಹಾಸಿಗೆಗಳಿಗೆ ಕೇಸರಿ ಪಟ್ಟಿಗಳುಳ್ಳ ಹೊದಿಕೆಗಳನ್ನು ಹೊದಿಸಲಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಆಸ್ಪತ್ರೆಯ ಮುಖ್ಯ ವೈದ್ಯಕೀಯ ವರಿಷ್ಟಾಧಿಕಾರಿ ಡಾ. ಎನ್.ಕೆ ಶ್ರೀವಾಸ್ತವ, ಇದರಲ್ಲಿ ಯಾವುದೇ ಅಸಹಜತೆಯಿಲ್ಲ. ಈ ಹೊದಿಕೆಗಳನ್ನು ಪ್ರತಿದಿನ ಬದಲಾಯಿಸಲಾಗುತ್ತದೆ ಎನ್ನುವುದನ್ನು ಖಾತ್ರಿಪಡಿಸಲು ಇವುಗಳಿಗೆ ಬಣ್ಣಗಳ ಪಟ್ಟಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಮೂಲಗಳ ಪ್ರಕಾರ, ಈ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿ ಕೇಸರಿ ಪಟ್ಟಿಯ ಹೊದಿಕೆಗಳನ್ನು ಬಳಸಲಾಗಿದೆ. ಆಸ್ಪತ್ರೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಯಾವಾಗ ಬೇಕಾದರೂ ಅನಿರೀಕ್ಷಿತವಾಗಿ ಭೇಟಿ ನೀಡಲಿದ್ದಾರೆ. ರಾಣಾ ಬೇನಿ ಮಾಧೊ ಸಿಂಗ್ ಪ್ರತಿಮೆಗೆ ಶ್ರದ್ಧಾಂಜಲಿ ಕೋರಲು ಆಗಮಿಸುತ್ತಿರುವ ಆದಿತ್ಯನಾಥ್ ರಾಯ್ಬಿರೇಲಿಯ ಶಹೀದ್ ಚೌಕ್‌ಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಂತರ ಲಕ್ನೋಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News