×
Ad

ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ವತಿಯಿಂದ ಸ್ನೇಹ ಸಂಗಮ, ಅನುಸ್ಮರಣೆ

Update: 2019-08-27 23:27 IST

 ಪುತ್ತೂರು: ಶೈಖುನಾ ಉಕ್ಕುಡ ಉಸ್ತಾದ್ ಅಬ್ದುರ್ರಹ್ಮಾನ್ ಫೈಝಿ ಕರ್ನೂರು ರವರ ಶಿಷ್ಯ ವೃಂದದ ಸಂಘಟನೆ ರೌಳತುಲ್ ಉಲೂಂ ಒಲ್ಡ್  ಸ್ಟೂಡೆಂಟ್ಸ್ ಉಕ್ಕುಡ ಇದರ ಸ್ನೇಹ ಸಂಗಮ ಮತ್ತು ಶರಫುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಬನ್ನೂರು ಮದ್ರಸ ಹಾಲ್ ನಲ್ಲಿ ಸೆಯ್ಯಿದ್ ಉಮರ್ ತಂಙಳ್ ಬನ್ನೂರು ರವರ ದುಅಃ ದೊಂದಿಗೆ ಮೂಸ ಸಖಾಫಿಯ ಅಧ್ಯಕ್ಷತೆಯಲ್ಲಿ ಬನ್ನೂರು ಜುಮಾ ಮಸೀದಿ ಅಧ್ಯಕ್ಷ ಮ್ಯೊದು ಹಾಜಿ ಬನ್ನೂರು  ಉಪಸ್ಥಿತಿಯಲ್ಲಿ ನಡೆಯಿತು.

ಬನ್ನೂರು ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಉಧ್ಘಾಟಿಸಿದರು. ಮುಹಮ್ಮದ್ ಸಖಾಫಿ ನೆಲ್ಯಾಡಿ, ಬಾತಿಷ ಸಖಾಫಿ ಮಾದಪುರ, ಅಬ್ದುಲ್ ರಹ್ಮಾನ್ ಸಖಾಫಿ ಉಕ್ಕಿನಡ್ಕ ಎಸ್ ಜೆ ಎಂ ಪುತ್ತೂರು ರೇಂಜ್ ಅಧ್ಯಕ್ಷ ಮುಹಮ್ಮದ್ ಶರೀಫ್ ಸಖಾಫಿ ಸತ್ತಿಕ್ಕಳ್. ಮುಹಮ್ಮದ್ ಅಲಿ ಸಖಾಫಿ ಮಾದಪುರ, ಅಬೂಬಕ್ಕರ್ ಝುಹ್ರಿ ಕೊಟ್ಟುಂಬೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಸಮಿತಿಯ ವಾರ್ಷಿಕ ಕೌನ್ಸಿಲ್ ನಡೆಯಿತು. ಅಧ್ಯಕ್ಷ ಮೂಸ ಸಖಾಫಿ ಮಾದಪುರ, ಪ್ರ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು, ಕೋಶಾಧಿಕಾರಿ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಅಲಿ ಸಖಾಫಿ ಮಾದಪುರ, ಮುಹಮ್ಮದ್ ಶರೀಫ್ ಸಖಾಫಿ ಸತ್ತಿಕ್ಕಳ್, ಆಬೀದ್ ಸಖಾಫಿ ಮುಲರಪಟ್ನ, ಕಾರ್ಯದರ್ಶಿ ಗಳಾಗಿ ಶಮೀರ್ ಸಖಾಫಿ ಗರ್ಗಂದೂರು ಬಶೀರ್ ಸಖಾಫಿ ಉಕ್ಕುಡ ಹಾಗೂ ಸದಸ್ಯರಾಗಿ ಬಾದುಷ ಸಖಾಫಿ ಮಾದಪುರ ಅಬ್ದುರ್ರಹ್ಮಾನ್ ಸಖಾಫಿ ಉಕ್ಕಿನಡ್ಕ, ಅಬೂಬಕ್ಕರ್ ಝುಹ್ರಿ ಕೊಟ್ಟುಂಬೆ, ಅಬ್ದುರ್ರಹ್ಮಾನ್ ಸಖಾಫಿ ಬೀಟಿಗೆ, ಇಸ್ಮಾಯಿಲ್ ಸಖಾಫಿ ಕರ್ನೂರು ಆಯ್ಕೆ ಮಾಡಲಾಯಿತು.

ಪ್ರ ಕಾರ್ಯದರ್ಶಿ ಅಬ್ದುಲ್ ರಝಾಖ್ ಲತೀಫಿ ಕುಂತೂರು ಸ್ವಾಗತಿಸಿ, ಶಮೀರ್ ಸಖಾಫಿ ಗರ್ಗಂದೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News