×
Ad

ಹೋರಾಟ ರಾಜಕೀಯಕ್ಕೆ ಸ್ಫೂರ್ತಿ ಎ. ಕೆ. ಸುಬ್ಬಯ್ಯ: ಪಾಪ್ಯುಲರ್ ಫ್ರಂಟ್

Update: 2019-08-27 23:30 IST

ಬೆಂಗಳೂರು : ಫ್ಯಾಷಿಸಮ್ ನ ವಿಷ ವರ್ತುಲದಿಂದ ಹೊರಬಂದು ಮಾನವಹಕ್ಕು ಮತ್ತು ಸಾಂವಿಧಾನಿಕ ಮೌಲ್ಯಗಳಿಗಳಿಗಾಗಿ ಹೋರಾಟ ರಾಜಕೀಯವನ್ನು ನಡೆಸಿದ್ದ ಎ. ಕೆ. ಸುಬ್ಬಯ್ಯನವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಕ್ಕುಗಳಿಗಾಗಿ ರಾಜಕೀಯವನ್ನು ಪ್ರವೇಶಿಸಿದ ಸುಬ್ಬಯ್ಯ ಅವರು ಖ್ಯಾತ ನ್ಯಾಯವಾದಿಯಾಗಿ ನ್ಯಾಯಾಲಯದಲ್ಲಿ  ಸಂತ್ರಸ್ತರ ಪರವಾಗಿ ವಾದಿಸುತ್ತಿದ್ದರು. ತಮ್ಮ ಜೀವನವನ್ನು ಸಾಮಾಜಿಕ ನ್ಯಾಯದ ಹೋರಾಟಕ್ಕಾಗಿ ಮುಡಿಪಾಗಿಟ್ಟ ಅವರು, ಫ್ಯಾಷಿಸಮ್ ನ ಎಲ್ಲ ಸುಪ್ತ ಆಯಾಮಗಳನ್ನೂ ಅರಿತಿದ್ದರು. ಹೀಗಾಗಿ ಅವರು ಪ್ರತಿಪಾದಿಸುತ್ತಿದ್ದ ಮೌಲ್ಯಗಳು ಮಾನವ ಹಕ್ಕುಗಳನ್ನು ಎತ್ತಿಹಿಡಿಯುತ್ತಿದ್ದವು. ಎ. ಕೆ. ಸುಬ್ಬಯ್ಯನವರು ಕೇವಲ ಸಾಮಾನ್ಯ ರಾಜಕಾರಣಿಯಾಗಿರದೆ ಹೋರಾಟ ರಾಜಕೀಯಕ್ಕೆ ಸ್ಫೂರ್ತಿಯಾಗಿದ್ದರು ಎಂದರು.

ಪಾಪ್ಯುಲರ್ ಫ್ರಂಟಿನ ಹಲವು ಕಾನೂನು ಹೋರಾಟಗಳಲ್ಲಿ, ಪ್ರತಿಭಟನೆಗಳಲ್ಲಿ ಕೈಜೋಡಿಸಿದ್ದ ಎ. ಕೆ. ಸುಬ್ಬಯ್ಯ ಅವರು, ಜನರಿಗೆ ಕಾನೂನು ಜಾಗೃತಿ ಮೂಡಿಸಬೇಕಾದ ಅಗತ್ಯತೆಯನ್ನು ಯಾವಾಗಲೂ ಒತ್ತಿ ಹೇಳುತ್ತಿದ್ದರು. ಪಾಪ್ಯುಲರ್ ಫ್ಂಟ್ ತನ್ನ ಹೋರಾಟದ ಹಾದಿಯಲ್ಲಿ ಎ. ಕೆ. ಸುಬ್ಬಯ್ಯನವರ ಮಾರ್ಗದರ್ಶನ ಮತ್ತು ಸೇವೆಯನ್ನು ಸದಾ ಸ್ಮರಿಸುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News