×
Ad

ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವು

Update: 2019-08-28 18:33 IST

ಪಡುಬಿದ್ರಿ: ಪ್ರವಾಹ ಪೀಡಿತ ಮಲ್ಲಾಪುರ ಗ್ರಾಮದ ಸಂತ್ರಸ್ತರಿಗೆ ಹೆಜಮಾಡಿ ಎಸ್‍ಎಸ್ ರೋಡ್‍ನ ಖಿದ್ಮತುಲ್ ಇಸ್ಲಾಂ ಯಂಗ್‍ಮೆನ್ಸ್ ಎಸೋಸಿಯೇಶನ್ ವತಿಯಿಂದ ದಿನಬಳಕೆ ಸಾಮಾಗ್ರಿಗಳನ್ನು ಇತ್ತೀಚೆಗೆ ಹಸ್ತಾಂತರಿಸಿದರು. 

ಇತ್ತೀಚೆಗೆ ಭಾರೀ ಮಳೆಯಿಂದ ಕರಾವಾರದ ಮಲ್ಲಾಪುರ ಗ್ರಾಮವು ಪ್ರವಾಹಕ್ಕೊಳಗಾಗಿ ಹಲವು ಮಂದಿ ಸಂತ್ರಸ್ತರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಯಂಗ್‍ಮೆನ್ಸ್ ಕಾರ್ಯಕರ್ತರು ಹೆಜಮಾಡಿಯಲ್ಲಿ ನಿರಾಶ್ರಿತರಿಗೆ ಅಗತ್ಯ ಇರುವ ದಿನ ಬಳಕೆ ಸಾಮಾಗ್ರಿಗಳನ್ನು ಸಂಗ್ರಹಿಸಿ ಮಲ್ಲಾಪುರದ ಪಿಡಿಓ ಎನ್. ಅರುಣ ಅವರ ಮೂಲಕ ಹಸ್ತಾಂತರಿಲಾಯಿತು. 

ಈ ಸಂದರ್ಭದಲ್ಲಿ ಕಾರ್ಯಕರ್ತರ ಪರಿಶ್ರಮವನ್ನು ಅವರು ಶ್ಲಾಘಿಸಿದರು. ಸಂಸ್ಥೆಯ ಅಧ್ಯಕ್ಷ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News