×
Ad

ನಾರ್ತ್ ಅಮೆರಿಕನ್ ಯುತ್ ಚೆಸ್ ಚಾಂಪಿಯನ್‌ಶಿಪ್: ಡೆರಿಕ್ ಚೆಸ್ ಸ್ಕೂಲ್‌ನ ಆರನ್ ತೃತೀಯ

Update: 2019-08-28 18:48 IST

ಮಂಗಳೂರು, ಆ.28: ಕೆನಡಾದ ಒಂಟೋರಿಯೊದಲ್ಲಿ ಆ.15ರಿಂದ 20ರವರೆಗೆ ನಡೆದ ‘ನಾರ್ತ್ ಅಮೆರಿಕನ್ ಯುತ್ ಚೆಸ್ ಚಾಂಪಿಯನ್‌ಶಿಪ್’ನಲ್ಲಿ ನಗರದ ಡೆರಿಕ್ಸ್ ಚೆಸ್ ಸ್ಕೂಲ್‌ನ ಪ್ರತಿಭೆ ಆರನ್ ರೀವ್ ಮೆಂಡಿಸ್ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಆರನ್ ರೀವ್ ಮೆಂಡಿಸ್ ಒಂಬತ್ತು ಸುತ್ತುಗಳಲ್ಲಿ ಏಳು ಅಂಕ ಗಳಿಸಿ, ಜಂಟಿಯಾಗಿ ದ್ವಿತೀಯ ಸ್ಥಾನ ಹಂಚಿಕೊಂಡಿದ್ದರು. ಟೈಬ್ರೇಕ್ ಪಾಯಿಂಟ್‌ಗಳಿಂದಾಗಿ ಅವರು ತೃತೀಯ ಸ್ಥಾನವನ್ನು ಪಡೆದರು.

ಉತ್ತರ ಅಮೆರಿಕ ಖಂಡ ವಿಭಾಗದಲ್ಲಿ ವಯೋಮಿತಿಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಕಾರಣ 'World Chess Federation' ನಿಂದ ‘ಕ್ಯಾಂಡಿಡೇಟ್ ಮಾಸ್ಟರ್’ ಪದವಿಯನ್ನು ಆರನ್ ಪಡೆದರು.

ಆರನ್ ರೀವ್ ಮೆಂಡಿಸ್ ಮಂಗಳೂರಿನ ವೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದು, ಮಂಗಳೂರು ಮೂಲದ ಅರುಣ್ ಹಾಗೂ ಜೆನಿಫರ್ ದಂಪತಿಯ ಪುತ್ರರಾಗಿದ್ದಾರೆ ಎಂದು ಡೆರಿಕ್ಸ್ ಡೆಸ್ ಸ್ಕೂಲ್‌ನ ಮ್ಯಾನೇಜರ್ ದೀಕ್ಷಿತಾ ಪಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News