×
Ad

ಏರ್ ಇಂಡಿಯಾಗೆ ನೇಮಕಾತಿ ಜಾಹೀರಾತಿನ ಅಸಲಿಯತ್ತೇನು? :ಇಲ್ಲಿದೆ ಉತ್ತರ…

Update: 2019-08-28 21:03 IST

ಹೊಸದಿಲ್ಲಿ,ಆ.28: ತನ್ನ ಹೆಸರಿನಲ್ಲಿ ನಕಲಿ ನೇಮಕಾತಿ ಜಾಹೀರಾತೊಂದನ್ನು ಪತ್ತೆ ಹಚ್ಚಿರುವ ಏರ್ ಇಂಡಿಯಾ ಈ ಬಗ್ಗೆ ಶೀಘ್ರವೇ ಪೊಲೀಸ್ ದೂರನ್ನು ದಾಖಲಿಸಲಿದೆ. ಏರ್ ಇಂಡಿಯಾದಲ್ಲಿ ಒಟ್ಟು 120 ಖಾಲಿ ಹುದ್ದೆಗಳಿದ್ದು,ಅರ್ಜಿ ಸಲ್ಲಿಸಲು ಬಯಸುವವರು 9,800 ರೂ.ಗಳ ಮರಳಿಸಲಾಗುವ ಠೇವಣಿ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

 ಏರ್ ಇಂಡಿಯಾಕ್ಕೆ ಬುಧವಾರ ಸಾಮಾಜಿಕ ಮಾಧ್ಯಮದ ಮೂಲಕ ಈ ನಕಲಿ ಜಾಹೀರಾತಿನ ಬಗ್ಗೆ ಗೊತ್ತಾಗಿದೆ. ವ್ಯಕ್ತಿಯೋರ್ವ ಈ ಜಾಹೀರಾತನ್ನು ಪೋಸ್ಟ್ ಮಾಡಿ,ಇಂತಹ ನೇಮಕಾತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆಯೇ ಎಂದು ಏರ್ ಇಂಡಿಯಾವನ್ನು ಪ್ರಶ್ನಿಸಿದ್ದ.

ಎರಡು ಪುಟಗಳ ಈ ಜಾಹೀರಾತಿನಲ್ಲಿ ರೋಹನ್ ವರ್ಮಾ ಎಂಬ ವ್ಯಕ್ತಿಯನ್ನು ಸಂಪರ್ಕಿಸುವಂತೆ ಮತ್ತು ಮರಳಿಸಲಾಗುವ ಭದ್ರತಾ ಠೇವಣಿ 9,800 ರೂ.ಹಾಗೂ ಜಿಎಸ್‌ಟಿಯನ್ನು ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ. ಜಾಹೀರಾತಿನಲ್ಲಿ ಏರ್ ಇಂಡಿಯಾ ಬಿಲ್ಡಿಂಗ್,ಅಕೋಲಾ,ಸಾಂತಾಕ್ರೂಝ್ ಪೂರ್ವ, ಮುಂಬೈ-400047 ಎಂಬ ನಕಲಿ ವಿಳಾಸವನ್ನೂ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News