ಸಹ ನಿರೂಪಕನನ್ನು ಗೊರಿಲ್ಲಾಗೆ ಹೋಲಿಸಿ ಕ್ಷಮೆ ಕೋರಿದ ಟಿವಿ ನಿರೂಪಕಿ

Update: 2019-08-28 16:28 GMT

ವಾಶಿಂಗ್ಟನ್, ಆ. 28: ಅಮೆರಿಕದ ಸುದ್ದಿ ಚಾನೆಲೊಂದರ ನಿರೂಪಕಿಯು ತನ್ನ ಕರಿಯ ಸಹ ನಿರೂಪಕನನ್ನು ಗೊರಿಲ್ಲಾಗೆ ಹೋಲಿಸಿದ ಬಳಿಕ, ನೇರಪ್ರಸಾರದಲ್ಲೇ ಕ್ಷಮೆ ಕೋರಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ಮಂಗಳವಾರ ವರದಿ ಮಾಡಿದೆ.

 ಓಕ್ಲಹಾಮ ನಗರದ ‘ಕೋಕೊ 5 ನ್ಯೂಸ್’ ಚಾನೆಲ್‌ನಲ್ಲಿ ಕಳೆದ ಗುರುವಾರ ಗೊರಿಲ್ಲಾ ಕುರಿತ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಪರದೆಯಲ್ಲಿ ಮರಿ ಗೊರಿಲ್ಲಾವೊಂದರ ವೀಡಿಯೊ ಕಾಣಿಸಿಕೊಂಡಾಗ ಬಿಳಿಯ ನಿರೂಪಕಿ ಅಲೆಕ್ಸ್ ಹೌಸ್ಡನ್ ತನ್ನ ಕರಿಯ ಸಹ ನಿರೂಪಕ ಜಾಸನ್ ಹ್ಯಾಕೆಟ್‌ನತ್ತ ತಿರುಗಿ, ‘‘ಅದು ಸ್ವಲ್ಪ ನಿಮ್ಮ ಥರ ಕಾಣುತ್ತಿದೆ’’ ಎಂದು ಹೇಳಿದರು ಎಂದು ಎನ್‌ಬಿಸಿ ವರದಿ ಮಾಡಿದೆ.

ಮಾರನೇ ದಿನ ಕಣ್ಣಲ್ಲಿ ನೀರು ತುಂಬಿಕೊಂಡ ಹೌಡ್ಸನ್ ಹ್ಯಾಕೆಟ್ ಬಳಿ ಕ್ಷಮೆ ಕೋರಿದರು. ‘‘ನಾನು ನಿನ್ನೆ ಹೇಳಿದ ಮಾತೊಂದು ಸರಿಯಾಗಿರಲಿಲ್ಲ. ಆ ಮೂಲಕ ನಾನು ಜನರ ಮನ ನೋಯಿಸಿದೆ’’ ಎಂದು ಅವರು ಹೇಳಿದರು.

‘‘ನಾನು ಹೇಳಿದ ಮಾತುಗಳಿಗಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ನನ್ನ ಹೃದಯದಾಳದಿಂದ ಹೇಳುತ್ತಿದ್ದೇನೆ. ನಾನು ಹೇಳಿರುವುದಕ್ಕಾಗಿ ಕ್ಷಮೆ ಕೋರುತ್ತೇನೆ. ಅದು ತಪ್ಪು ಎಂದು ನನಗೆ ಗೊತ್ತಾಗಿದೆ. ನನ್ನಿಂದ ತಪ್ಪಾಗಿದೆ’’ ಎಂದರು.

 ಕ್ಷಮಾಪಣೆಯನ್ನು ಹ್ಯಾಕೆಟ್ ಸ್ವೀಕರಿಸಿದರು. ಆದರೆ, ಆ ಮಾತುಗಳು ನನ್ನನ್ನು ತೀವ್ರ ಘಾಸಿಗೊಳಿಸಿತ್ತು ಎಂಬುದನ್ನು ಒಪ್ಪಿಕೊಂಡರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News