ಮನೆಯೊಳಗೆ ಎಡವಿ ಬಿದ್ದು ಮೃತ್ಯು

Update: 2019-08-28 16:35 GMT

ಕಾರ್ಕಳ, ಆ.28: ಮನೆಯೊಳಗೆ ಎಡವಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಆನೆಕೆರೆ ಕಟ್ಟಣಿಗೆ ಎಂಬಲ್ಲಿ ನಡೆದಿದೆ.
ಆನೆಕೆರೆಯ ಮೀರ(54) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರುವ ಇವರು, ಮನೆಯಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದರು. ಆ.25ರಿಂದ ಆ.28ರ ಮಧ್ಯಾವಧಿಯಲ್ಲಿ ಇವರು ಒಳ ಕೋಣೆಯ ಬಾಗಿಲಿನ ಬಳಿ ಎಡವಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News