ಕೋಟ: ಮೃತ ಮೊಮ್ಮಕ್ಕಳ ಚಿಂತೆಯಲ್ಲಿ ಅಜ್ಜಿ ಆತ್ಮಹತ್ಯೆ
Update: 2019-08-28 22:09 IST
ಕೋಟ, ಆ.28: ಬಹು ಅಂಗಾಂಗ ಕಾಯಿಲೆಯಿಂದ ಮೃತಪಟ್ಟ ಮೂವರು ಮೊಮ್ಮಕ್ಕಳ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಅಜ್ಜಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಬೆಳ್ವೆಯ ತೋಟದ ಮನೆ ನಿವಾಸಿ ಬೆಳಕು ಪೂಜಾರ್ತಿ(69) ಎಂದು ಗುರುತಿಸಲಾಗಿದೆ. ಆ.25ರಂದು ಮನೆಯಲ್ಲಿ ಯಾರಿಗೂ ಹೇಳದೆ ನಾಪತ್ತೆಯಾಗಿದ್ದ ಇವರ ಮೃತದೇಹವು ಆ.28ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಂಚಾರು ಗ್ರಾಮದ ಹೆಬ್ಬಾರ್‌ಬೆಟ್ಟು ಸೀತಾನದಿಯ ದಡದಲ್ಲಿ ಪತ್ತೆಯಾಗಿದೆ.
ಇವರು ತನ್ನ ಮಗಳು ಶಾಂತಾಳ ಮೂರು ಜನ ಹೆಣ್ಣು ಮಕ್ಕಳು ಬಹು ಅಂಗಾಂಗ ಕಾಯಿಲೆಯಿಂದ ಮೃತಪಟ್ಟ ಬಗ್ಗೆ ಮಾನಸಿಕವಾಗಿ ನೊಂದು ಆ.25ರಿಂದ ಆ.28ರ ಮಧ್ಯಾವಧಿಯಲ್ಲಿ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.