ಸೆ.2-4; ಬಂಟರ ಸಂಘಗಳ ಒಕ್ಕೂಟದಿಂದ ತೆನೆಹಬ್ಬ ಗಣೇಶೋತ್ಸವ

Update: 2019-08-28 17:23 GMT

ಮಂಗಳೂರು,ಅ.28: ಬಂಟರಯಾನೆ ನಾಡವರ ಮಾತೃ ಸಂಘ ಮಂಗಳೂರು,ಇದರ ತಾಲೂಕು ಸಮಿತಿ ಮತ್ತು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಇದರ ವತಿಯಿಂದ ದ.ಕ,ಉಡುಪಿ ಮತ್ತು ಕಾಸರಗೋಡು ಬಂಟರ ಸಂಘಗಳ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀಗಣೇಶೋತ್ಸವ ತೆನೆಹಬ್ಬ, ಸಹಸ್ರ ಅಷ್ಟೋತ್ತರ ನಾರಿಕೇಲ ಮಹಾಗಣಯಾಗ ಶ್ರದ್ಧಾ, ಭಕ್ತಿ,ವಿಜೃಂಭಣೆಯೊಂದಿಗೆ ಈ ಬಾರಿ 16ನೆ ವರುಷದ ಆಚರಣೆ ನಡೆಯಲಿದೆ ಎಂದು ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಮಾಲಾಡಿ ಅಜಿತ್ ಕುಮಾರ್ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಮಾಜದ ಎಲ್ಲಾ ವಯೋಮಾನದ ಪ್ರತಿಭಾವಂತರಿಗೆ ಅವರ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.1ರಂದು ಅಪರಾಹ್ನ 4 ಗಂಟೆಗೆ ಹತ್ತನೆ ತರಗತಿಯವರೆಗಿನ ಮಕ್ಕಳ ಚಿತ್ರಕಲಾ ಸ್ಪರ್ಧೆ ಶೀ ರಾಮಕೃಷ್ಣ ವಿದ್ಯಾಸಂಸ್ಥೆ ಬಂಟ್ಸ್‌ಹಾಸ್ಟೆಲ್‌ನಲ್ಲಿ ನಡೆಯಲಿದೆ. ಸಂಜೆ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಗಣಪತಿ ವಿಗ್ರಹವನ್ನು ರಾಧಾಕೃಷ್ಣ ಮಂದಿರದಿಂದ ಬರಮಾಡಿಕೊಳ್ಳಲಾಗುವುದು.

ಸೆ.2;ತೆನೆ ಹಬ್ಬ:- ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಧ್ವಜಾರೋಹಣ ಕ್ಯಾಪ್ಟನ್ ವಿ.ದೀಪಕ್ ಅಡ್ಯಂತಾಯ ಶ್ರೀಮತಿ ಸುಲೋಚನಾ ಅಡ್ಯಂತಾಯ ನೆರವೇರಿಸಲಿದ್ದಾರೆ. ಬಳಿಕ ತೆನೆಹಬ್ಬ, ಮಹಾಪೂಜೆ, ಕಲೋತ್ಸವ, ಸಂಜೆ ಬಂಟ ಸಮಾಜದವರಿಂದ ಧಾರ್ಮಿಕ ಕಲೋತ್ಸವ ಧಾರ್ಮಿಕ ಸಭೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಯು.ಟಿ.ಖಾದರ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಎಸ್.ಅಂಗಾರ, ಸಂಜೀವ ಮಠಂದೂರು, ಹರೀಶ್ ಪೂಂಜಾ ಮಂಗಳೂರು ವಿ.ವಿ.ಕುಲಪತಿ ಪಿ.ಎಸ್.ಎಡಪಡಿತ್ತಾಯ, ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಕಾಪು ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ  ವಾಸುದೇವ ಶೆಟ್ಟಿ ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಂಟರಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಾಮಾಜಿಕ ಧಾರ್ಮಿಕ,ಶೈಕ್ಷಣಿಕ ಉದ್ಯಮಕ್ಷೇತ್ರದಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಬಾರಿ ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ,ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ, ಉದ್ಯಮಿಗಳಾದ ಮೊಹನ್ ನಾಯ್ಕಾ, ದಿನೇಶ್ ಶೆಟ್ಟಿ ಉಪನ್ಯಾಸಕ ಡಾ.ರವೀಶ್ ಪರವ ಪಡುಮಲೆ, ಆದಾಯ ತೆರಿಗೆ ಇಲಾಖೆ ಬೆಂಗಳೂರು ಇದರ ಸಹಾಯಕ ಆಯುಕ್ತೆ ನಿವ್ಯಾ ಪಿ.ಶೆಟ್ಟಿವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸೆ.3ರಂದು ಭಜನೆ, ಮಹಾಪೂಜೆ, ಅಷ್ಟೋತ್ತರ ಸಹಸ್ರ ನಾರೀಕೇಲ ಮಹಾಗಣಯಾಗ ಸೇವಾರ್ಥಿಗಳಿಂದ ಸಂಕಲ್ಪ ನಡೆಯಲಿದೆ. ಸೆ.4ರಂದು ಪ್ರಾತಃಕಾಲದ ಮಹಾಪೂಜೆ,ಮಹಾಗಣ ಯಾಗದ ಪುರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ, ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮದೊಂದಿಗೆ ಶೋಭಾಯತ್ರೆ ಸಂಜೆ 3.30ಕ್ಕೆ ಓಂಕಾರನಗರದಿಂದ ಆರಂಭಗೊಂಡು ಮಹಾಮ್ಮಾಯಿ ದೇವಸ್ಥಾನದ ಕೆರೆಯ ವರೆಗೆ ಶೋಭಾಯಾತ್ರೆನಡೆಯಲಿದೆ ಎಂದು ಅಜಿತ್ ಕುಮಾರ್‌ರಯ ಮಾಲಾಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಮಂಜುನಾಥ ಭಂಡಾರಿ ಶೆಡ್ಯೆ,ಬೆಳ್ಳಿಪ್ಪಾಡಿ ಕೃಷ್ಣ ಪ್ರಸಾದ್ ರೈ,ಡಾ.ಆಶಾ ಜ್ಯೋತಿ ರೈ,ರವಿರಾಜ ಶೆಟ್ಟಿ, ಆನಂದ ಶೆಟ್ಟಿ ಅಡ್ಯಾರ್,ಉಮೇಶ್ ರಯ ಪದವು ಮೇಗಿನ ಮನೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News