×
Ad

ಆ.31: ಖಾಸಿಂ ಉಸ್ತಾದ್‌ರ ಅನುಸ್ಮರಣೆ

Update: 2019-08-28 23:13 IST

ಮಂಗಳೂರು, ಆ.28: ಮಜ್ಲಿಸು ಸನಾಬಿಲಿಲ್ ಇರ್ಫಾನ್ ಓಲ್ಡ್ ಸ್ಟೂಡೆಂಟ್ಸ್ ಆಫ್ ಎಂ.ಪಿ ಉಸ್ತಾದ್ ಇದರ ವತಿಯಿಂದ ಆ.31ರ ಪೂರ್ವಾಹ್ನ 11 ಗಂಟೆಗೆ ಮಂಜೇಶ್ವರ ಸಮೀಪದ ಪಾವೂರು, ಬಾಚಳಿಕೆ ಜಬಲುನ್ನೂರ್ ಮಸೀದಿ ವಠಾರದಲ್ಲಿ ಶೈಖುನಾ ಎಂ.ಎ. ಖಾಸಿಂ ಉಸ್ತಾದ್‌ರ ಅನುಸ್ಮರಣೆ ಮತ್ತು ಖತಮುಲ್ ಖುರ್‌ಆನ್ ತಹ್ಲೀಲ್ ಸಮರ್ಪಣೆ ಹಾಗೂ ಮಜ್ಲಿಸುನ್ನೂರ್ ಉದ್ಘಾಟನೆ ನಡೆಯಲಿದೆ.

ಶೈಖುನಾ ಎಂಪಿ ಮುಹಮ್ಮದ್ ಸಅದಿಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೈಯದ್ ಇಬ್ರಾಹಿಂ ಬಾತಿಷ್ ತಂಙಳ್, ಶಂಸುದ್ದೀನ್ ತಂಙಳ್, ಅಬ್ದುರ್ರಹ್ಮಾನ್ ತಂಙಳ್, ಯು.ಕೆ.ಮುಹಮ್ಮದ್ ಹನೀಫ್ ನಿಝಾಮಿ, ಅಬ್ದುನ್ನಾಸಿರ್ ಯಮಾನಿ, ಎಸ್‌ಎಚ್ ಹೈದರ್ ದಾರಿಮಿ, ಜಲಾಲುದ್ದೀನ್ ಫೈಝಿ, ಮೋನು ಹಾಜಿ, ಅಬ್ದುರ್ರಹ್ಮಾನ್, ಹಾರಿಸ್, ಐಪಿ ಹನೀಫ್, ಮೂಸಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News