ಉಡುಪಿ: ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘಕ್ಕೆ ಚುನಾವಣೆ
ಉಡುಪಿ, ಆ.28: ಉಡುಪಿ ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಚುನಾವಣೆಯು ಸ್ಥಾಪಕ ಅಧ್ಯಕ್ಷ ಶಿವರಾಮ ಶೆಟ್ಟಿ ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಸೇಸಪ್ಪ (ಕೃಷಿ ಇಲಾಖೆ), ಉಪಾಧ್ಯಕ್ಷರಾಗಿ ರವೀಂದ್ರ (ಹಿಂದುಳಿದ ವರ್ಗ ಕಲ್ಯಾಣ ಇಲಾಖೆ), ಕಾರ್ಯದರ್ಶಿಯಾಗಿ ಸೆಲ್ವರಾಜ್ ಸಿ.ಕೆ (ಆರೋಗ್ಯ ಇಲಾಖೆ), ಜಂಟಿ ಕಾರ್ಯದರ್ಶಿಯಾಗಿ ಈಶ್ವರ ಹೆಚ್(ಆರೋಗ್ಯ ಇಲಾಖೆ), ಖಜಾಂಚಿಯಾಗಿ ಶಂಕರ ಪಿ.(ಆರೋಗ್ಯ ಇಲಾಖೆ), ಸಂಘಟನಾ ಕಾರ್ಯದರ್ಶಿಯಾಗಿ ಜಬಿಯುಲ್ಲ ರೆಹಮಾನ್ ಖಾನ್ (ಪಿಡ್ಲ್ಯೂಡಿ ಇಲಾಖೆ) ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನೇಶ್ (ಅಬಕಾರಿ ಇಲಾಖೆ), ಮಚೇಂದ್ರ ಜೋಗಿ (ಕಂದಾಯ ಇಲಾಖೆ), ರಾಘವೇಂದ್ರ (ಶಿಕ್ಷಣ ಇಲಾಖೆ), ಮಂಜುನಾಥ (ಆರೋಗ್ಯ ಇಲಾಖೆ), ಚಂದ್ರಶೇಖರ (ಕಂದಾಯ ಇಲಾಖೆ) ಇವರುಗಳನ್ನು ಮುಂದಿನ ಸಾಲಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣೆಯನ್ನು ಶ್ರೀನಿವಾಸ ಶೆಟ್ಟಿ ತೋನ್ಸೆ ನಡೆಸಿಕೊಟ್ಟರು.