‘ಪ್ರತಿಯೋರ್ವರಿಗೂ ಕಾನೂನಿನ ಸಾಮಾನ್ಯ ಅರಿವಿರಲಿ’
ಭಟ್ಕಳ, ಆ.28: ಪ್ರತಿಯೊಬ್ಬರಿಗೂ ಕಾನೂನಿನ ಕುರಿತಾದ ಸಾಮಾನ್ಯ ಜ್ಞಾನ ಅಗತ್ಯ ಎಂದು ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಆರ್. ಆರ್.ಶ್ರೇಷ್ಠಿ ಹೇಳಿದ್ದಾರೆ.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ಶಿಕ್ಷಣ ಇಲಾಖೆ ಭಟ್ಕಳ ಹಾಗೂ ಅಭಿಯೋಜನ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಆರ್.ಎನ್.ಎಸ್. ರೂರಲ್ ಪಾಲಿಟೆಕ್ನಿಕಲ್ಲಿ ಕಾನೂನು ಸಾಕ್ಷರತಾ ಮತ್ತು ಲೋಕ ಅದಾಲತ್‌ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದತ್ತಾಂಶ ಸಂಗ್ರಹಣೆ ಕಾನೂನು 2018ರ ಶಾಸನ ಸಭೆಯಲ್ಲಿ ಇನ್ನೂ ಶಾಸನ ಸಿಕ್ಕಿಲ್ಲ ಒಂದಾನು ವೆಳೆ ಸಿಕ್ಕಿದ್ದೆ ಆದಲ್ಲಿ ನಮ್ಮಲ್ಲಿರುವ ದತ್ತಾಂಶ, ದಾಖಲೆ ಇನ್ನೊಬ್ಬರ ಕೈಗೆ ಹೋಗಲು ಸಾಧ್ಯವಿಲ್ಲ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು. ಭಟ್ಕಳ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಂದ್ರ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ ಮಾತನಾಡಿ, ದೇಶದಲ್ಲಿನ ಯಾವುದೇ ಒಬ್ಬ ನಾಗರಿಕ ತನ್ನ ಬಡತನದ ಕಾರಣದಿಂದಾಗಿ ನ್ಯಾಯದಿಂದ ವಂಚಿತನಾಗಬಾರದೆಂದು ಕಾನೂನು ಸೇವಾ ಪ್ರಾಧಿಕಾರ ರಚನೆಯಾಗಿದೆ. ವಿದ್ಯಾರ್ಥಿನಿಯರಿಗೆ ಏನಾದರೂ ತೊಂದರೆ ಉಂಟಾದರೆ ನ್ಯಾಯಾಲಯದಲ್ಲಿರುವ ದೂರು ಪೆಟ್ಟಿಗೆಯಲ್ಲಿ ಸಮಸ್ಯೆ ಬರೆದು ಹಾಕಿದರೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿದ್ಯಾರ್ಥಿನಿಯರು, ಮಹಿಳೆಯರು ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯ ಸಹಿಸಿಕೊಳ್ಳದೇ ತಪ್ಪಿತಸ್ಥರ ಮೇಲೆ ಪೊಲೀಸ್ ಇಲಾಖೆ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಕಿವಿಮಾತು ಹೇಳಿದರು.
ಆರ್.ಎನ್.ಎಸ್. ರೂರಲ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಸಂತೋಷ ಆರ್.ಎ. ಮಾತನಾಡಿ, ಕಾನೂನಿಗೆ ಎಲ್ಲರೂ ಸರಿ ಸಮಾನರು, ಕಾನೂನು ಉಲ್ಲಂಘನೆ ಆದರೆ ಶಿಕ್ಷೆಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ವೈ.ಎಫ್.ಗೋಮ್ಸ್ ಉಪ ಪ್ರಾಂಶುಪಾಲ ಮರಿಸ್ವಾಮಿ, ಸಾಯಿ ದತ್ತ ಸೇರಿದಂತೆ ಕಾಲೇಜಿನ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.