ಅಮಿತ್ ಶಾ ಈ ಯುಗದ ಲೋಹಪುರುಷ: ಅಂಬಾನಿ

Update: 2019-08-29 18:25 GMT

ಗಾಂಧಿನಗರ (ಗುಜರಾತ್), ಆ. 29: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ‘ನಿಜವಾದ ಕರ್ಮಯೋಗಿ, ನಮ್ಮ ಯುಗದ ಲೋಹಪುರುಷ ’ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ ಅಂಬಾನಿ ಬಣ್ಣಿಸಿ, ಪ್ರಶಂಸಿಸಿದರು.

ಇಲ್ಲಿಯ ಪಂಡಿತ ದೀನದಯಾಳ ಪೆಟ್ರೋಲಿಯಂ ಯುನಿವರ್ಸಿಟಿಯ ಏಳನೇ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ಅಂಬಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾ ಅವರನ್ನು ಉದ್ದೇಶಿಸಿ ಪ್ರಶಂಸೆಗಳ ಸುರಿಮಳೆಗೈದರು. ನಿಮ್ಮಂತಹ ಸ್ಫೂರ್ತಿದಾಯಕ ನಾಯಕ ಸಿಕ್ಕಿರುವುದು ಗುಜರಾತಿನ ಮತ್ತು ಈಗ ಭಾರತದ ಭಾಗ್ಯವಾಗಿದೆ ಎಂದರು.

ಭಾರತವು ಶೀಘ್ರದಲ್ಲಿಯೇ ವಿಶ್ವದಲ್ಲಿ ಅಗ್ರ ಡಿಜಿಟಲ್ ಸಮಾಜವಾಗಲಿದೆ ಎಂದ ಅವರು, ಮೊಬೈಲ್ ಡಾಟಾ ಬಳಕೆಯಲ್ಲಿ ವಿಶ್ವದಲ್ಲಿ 155ನೇ ಸ್ಥಾನದಲ್ಲಿದ್ದ ಭಾರತವು 24 ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಇದೇ ರೀತಿ ಮುಂದಿನ 24 ತಿಂಗಳುಗಳಲ್ಲಿ ಭಾರತವು ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಬ್ಲಾಕ್‌ಚೇನ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಇತರ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News