×
Ad

ಮಾನವನ ಸಹಾಯವನ್ನು ಪ್ರಕೃತಿ ನಿರೀಕ್ಷಿಸಲ್ಲ: ಕೃಪಾಕರ ಸೇನಾನಿ

Update: 2019-08-30 18:42 IST

ಉಡುಪಿ, ಆ.30: ಪ್ರಕೃತಿ ಏನು ಮಾಡಬೇಕೆಂದು ನಾವು ನಿರ್ಧಾರ ಮಾಡಲು ಆಗಲ್ಲ. ಒಂದು ಭೂಮಿ, ನೆಲ, ಗಾಳಿಗೆ ಅಲ್ಲಿ ಯಾವ ಗಿಡ ಇರ ಬೇಕು ಎಂಬುದನ್ನು ಅದೇ ನಿರ್ಧಾರ ಮಾಡುತ್ತದೆ. ನಾವು ದೆಹಲಿ, ಬೆಂಗಳೂರಿ ನಲ್ಲಿ ಕುಳಿತು ನಿರ್ಧಾರ ಮಾಡುವುದು ಸರಿಯಲ್ಲ ಎಂದು ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅರಣ್ಯ ಇಲಾಖೆ ಹಾಗೂ ಉಡುಪಿ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ವನ್ಯಜೀವಿ ಪತ್ರಿಕೋದ್ಯಮ ಮತ್ತು ಅರಣ್ಯ ಸಂರಕ್ಷಣೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡುತ್ತಿ ದ್ದರು.

ಪ್ರಕೃತಿಯು ಮಾನವನ ಕಳಕಳಿ, ಭಾವನೆಯನ್ನು ನಿರೀಕ್ಷೆ ಮಾಡಲ್ಲ. ಅದನ್ನು ದೂರದಲ್ಲಿ ಕುಳಿತು ನೋಡಬೇಕೆ ಹೊರತು ಅದಕ್ಕೆ ನಮ್ಮ ಸಹಾಯ ಬೇಕಾಗಿಲ್ಲ. ಸಂಪೂರ್ಣವಾಗಿ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಆಗಲ್ಲ. ಪ್ರಕೃತಿ ಎಂಬುದು ಸಂಕೀರ್ಣತೆಯಿಂದ ಕೂಡಿದೆ ಎಂದರು.

ನಮ್ಮ ದೇಶದ ಪತ್ರಿಕೋದ್ಯಮ ಕಡಿಮೆ ಜನರಿಂದ ಹೆಚ್ಚು ಕೆಲಸ ಮಾಡಿಸುತ್ತಿದೆ. ಬೆಳಗ್ಗೆ ಅಪರಾಧ ಸುದ್ದಿ ಮಾಡಿದವನು ಸಂಜೆ ಪರಿಸರ ಸುದ್ದಿ ಕೂಡ ಮಾಡಬೇಕಾಗುತ್ತದೆ. ಇದರಿಂದ ಒಬ್ಬ ಪತ್ರಕರ್ತನಿಗೆ ಒಂದು ವಿಷಯದ ಬಗ್ಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಅವರು ತಿಳಿಸಿದರು.

ಪತ್ರಿಕೋದ್ಯಮದಲ್ಲಿ ಇಂದು ವೃತ್ತಿಪರತೆ ಇಲ್ಲವಾಗಿದೆ. ಕೆಲವೊಂದು ವಿಚಾರ ದಲ್ಲಿ ಅಜೆಂಡಾ ಇಟ್ಟುಕೊಂಡು ವರದಿ ಮಾಡಲಾಗುತ್ತಿದೆ. ಈ ಕ್ಷೇತ್ರಕ್ಕೆ ಕಾಲಿಡು ವವರು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕ್ಷೇತ್ರವನ್ನು ಆರಿಸುವಾಗ ಅದರ ಬಗ್ಗೆ ಅಧ್ಯಯನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಗುರಿಗೆ ಅರ್ಥವೇ ಇರುವುದಿಲ್ಲ ಎಂದರು.

ಪ್ರಕೃತಿ ಕುರಿತ ಪತ್ರಿಕಾ ವರದಿಗಳು ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಆದುದರಿಂದ ಅದನ್ನು ಸರಿಯಾಗಿ ತಿಳಿದುಕೊಂಡು ಬರೆಯಬೇಕಾ ಗಿದೆ. ಪತ್ರಕರ್ತರು ತಪ್ಪು ಬರೆಯುವ ಮೂಲಕ ಇಡೀ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಅದನ್ನು ದಾಟುವ ಕೆಲಸವನ್ನು ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಪ್ರಕೃತಿಗೆ ಮನುಷ್ಯನ ಅಗತ್ಯ ಇರಲ್ಲ. ಆದರೆ ಮನುಷ್ಯನಿಗೆ ಪ್ರಕೃತಿಯ ಅಗತ್ಯವಿದೆ. ಹೀಗಾಗಿ ಮನುಷ್ಯ ಪರಿಸರದ ಬಗ್ಗೆ ಯೋಚನೆ ಮಾಡಬೇಕು. ಮಾನವ ಏನು ಮಾಡಿದರೂ ಪರಿಸರ, ಭೂಮಿಗೆ ಏನು ಆಗಲ್ಲ. ಭೂಮಿಯಲ್ಲಿ ಮಾನವನಂತಹ ಲಕ್ಷಾಂತರ ಜೀವಿಗಳು ಬಂದು ಆಳಿದು ಹೋಗಿವೆ. ಇಂದು ಪ್ರಕೃತಿ ನಾಶದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಜನ ಮಾತನಾಡಲು ಆರಂಭಿಸಿದ್ದಾರೆ. ತನ್ನ ಬುಡಕ್ಕೆ ಬರುತ್ತಿರುವಾಗ ಮಾನವನಿಗೆ ತನ್ನ ತಪ್ಪಿನ ಅರಿವಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News