×
Ad

ದ.ಕ. ಸಹಕಾರಿ ಹಾಲು ಒಕ್ಕೂಟದ ಪದಾಧಿಕಾರಿಗಳಿಗೆ ಸನ್ಮಾನ

Update: 2019-08-30 18:43 IST

ಉಡುಪಿ, ಆ.30: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಕೆ. ರವಿರಾಜ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಕಾಶ್‌ಚಂದ್ರ ಶೆಟ್ಟಿ ಅವರಿಗೆ ಗುರುವಾರ ಉಡುಪಿ ಡೇರಿಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಹೆಗ್ಡೆ ಅವರು ರವಿರಾಜ ಹೆಗ್ಡೆ ಹಾಗೂ ಇತರರನ್ನು ಸನ್ಮಾನಿಸಿದರು.

ಉಪ ವ್ಯವಸ್ಥಾಪಕರಾದ ಲಕ್ಕಪ್ಪ, ಮುನಿರತ್ನಮ್ಮ, ಡಾ.ಅನಿಲ್ ಕುಮಾರ್ ಶೆಟ್ಟಿ, ಡಾ.ಮನೋಹರ್, ಡಾ ರವಿರಾಜ ಉಡುಪ, ಡಾ. ಮಾಧವ ಐತಾಳ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಲಕ್ಕಪ್ಪ ಸ್ವಾಗತಿಸಿ, ಸುಧಾಕರ್ ಕಾರ್ಯಕ್ರಮ ನಿರೂಪಿಸಿರು. ಶಂಕರ್ ನಾಯ್ಕ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News