×
Ad

'ಡಿ.ಕೆ. ಶಿವಕುಮಾರ್ ಬಂಧನ ಯತ್ನ ಬಿಜೆಪಿ ಪ್ರೇರಿತ'

Update: 2019-08-30 18:47 IST

ಉಡುಪಿ, ಆ. 30: ಆದಾಯ ತೆರಿಗೆ ಅಧಿಕಾರಿಗಳನ್ನು ಛೂ ಬಿಟ್ಟು ವಿರೋಧ ಪಕ್ಷಗಳ ನಾಯಕರನ್ನು ಮಟ್ಟ ಹಾಕುವ ಕೆಲಸ ಈ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಹಲವಾರು ನಾಯಕರನ್ನು ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳ ಮೂಲಕ ತನಿಖೆ ಹೆಸರಿನಲ್ಲಿ ಹದ್ದುಬಸ್ತಿನಲ್ಲಿ ಡುವ ಪ್ರಯತ್ನಗಳು ನಡೀತಾ ಇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದ್ದಾರೆ.

ಇದೀಗ ಕರ್ನಾಟಕದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇವರನ್ನು ತನಿಖೆ ನಡೆಸುವ ನೆಪದಲ್ಲಿ ಬಂಧಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅಕ್ರಮ ಹಣಗಳಿಕೆಯಲ್ಲಿ ಬಿಜೆಪಿ ಅನೇಕ ನಾಯಕರ ಮೇಲೆ ಆಪಾದನೆಗಳಿದ್ದರೂ ಅವರ ವಿರುದ್ಧ ಯಾವುದೇ ತನಿಖೆಯನ್ನು ಕೈಗೊಳ್ಳದೇ ಕೇವಲ ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿ ನಡೆಸುವ ಆದಾಯ ಇಲಾಖೆಯ ಏಕಪಕ್ಷೀಯ ಕ್ರಮವನ್ನು ಈ ದೇಶದ ಜನತೆ ಗಮನಿಸುತ್ತಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಬಿಜೆಪಿ ಇದಕ್ಕೆ ಭಾರಿ ತೆರಬೇಕಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News