6 ವರ್ಷಗಳಲ್ಲೇ ಅತೀ ಹೆಚ್ಚು ಕುಸಿತ ಕಂಡ ಜಿಡಿಪಿ: 5.8ರಿಂದ 5 ಶೇಕಡಕ್ಕೆ

Update: 2019-08-30 13:27 GMT

ಹೊಸದಿಲ್ಲಿ, ಆ.30: ಎಪ್ರಿಲ್ – ಜೂನ್ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇ.5ಕ್ಕೆ ತಲುಪಿದ್ದು, 6 ವರ್ಷಗಳಲ್ಲೇ ನಿಧಾನಗತಿಯ ಬೆಳವಣಿಗೆ ಇದಾಗಿದೆ. 2019-20 ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಜಿಡಿಪಿ 5.8 ಶೇ.ದಷ್ಟಿತ್ತು.

ಇದು 6 ವರ್ಷಗಳಲ್ಲೇ ಅತ್ಯಂತ ನಿಧಾನಗತಿಯ ಬೆಳವಣಿಗೆಯಾಗಿದ್ದು, 2013ರ ಮಾರ್ಚ್ ನಲ್ಲಿ ಜಿಡಿಪಿ ಬೆಳವಣಿಗೆ 4.3 ಶೇ.ದಷ್ಟಿತ್ತು. ಕಾರುಗಳ ಮಾರಾಟದಲ್ಲಿ ಕುಸಿತ, ಬಿಸ್ಕಟ್ ಕಂಪೆನಿಗಳ ತೀವ್ರ ಆರ್ಥಿಕ ಹಿನ್ನಡೆ ಮತ್ತು ಉದ್ಯೋಗ ಕಡಿತ ಈ ಕುಸಿತಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಡಿಮೆ ಗ್ರಾಹಕ ಬೇಡಿಕೆ ಮತ್ತು ಹೂಡಿಕೆ ಮತ್ತೊಂದು ಕಾರಣ ಎನ್ನಲಾಗಿದೆ. ಇದೇ ತ್ರೈಮಾಸಿಕ ಅವಧಿಯಲ್ಲಿ ಚೀನಾವು 6.2ಶೇ. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News