ಕುಂದಾಪುರ : ನುಸ್ರುತುಲ್ ಮಸಾಕೀನ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆ
ಕುಂದಾಪುರ : ನುಸ್ರುತುಲ್ ಮಸಾಕೀನ್ ಅಸೋಸಿಯೇಶನ್ ಕುಂದಾಪುರ ತಾಲೂಕು ಇದರ ವಾರ್ಷಿಕ ಮಹಾ ಸಭೆಯು ಜಿ.ಸರ್ ದಾರ್ ಅವರ ಅಧ್ಯಕ್ಷತೆಯಲ್ಲಿ ಎನ್.ಎಂ.ಎ ಸೌಹಾರ್ದ ಭವನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
2019-20ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೇಕ್ ಅಬು ಮೊಹಮ್ಮದ್ ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಜಿ. ಸರ್ ದಾರ್ ರನ್ನು, ಉಪಾಧ್ಯಕ್ಷರುಗಳಾಗಿ ಮೊಹಮ್ಮದ್ ಅಶ್ರಫ್ ಬ್ಯಾರಿ, ಮೊಹಮ್ಮದ್ ಅಲಿ ಹಾಗೂ ಶಾಬಾನ್ ಎ.ಎಚ್, ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ್ ಕುರೈಷಿ, ಜೊತೆ ಕಾರ್ಯದರ್ಶಿಗಳಾಗಿ ಆಸಿಫ್ ಮಸೂದ್, ಹಾಜಿ ಅಬುಶೇಕ್, ಕೋಶಾಧಿಕಾರಿಯಾಗಿ ಕೆ. ಮೊಹಮ್ಮದ್, ಜೊತೆ ಕೋಶಾಧಿಕಾರಿಯಾಗಿ ಅಹಮ್ಮದ್ ಯೂಸೂಫ್ ಮೋನು ಅವರನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಅಬ್ದುಲ್ಲಾ ಕೋಟೆ ಕೋಡಿ ಹಾಗೂ ಕೆ.ಎಸ್ ರಿಯಾಝ್‍ರನ್ನು ಲೆಕ್ಕ ಪರಿಶೋಧಕರಾಗಿ ಸಿದ್ದೀಕ್ ಮಾಸ್ಟರ್ ಹಾಗೂ ಎಂ.ಕೆ. ರವೂಫ್ ರನ್ನು ನೇಮಿಸಲಾಯಿತು. ಸಭೆಯಲ್ಲಿ ಎನ್.ಎಂ.ಎ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನಾಸಿರ್ ಹಳೆಕೋಟೆ ಹಾಗೂ ಸದಸ್ಯರಾಗಿ ಅಲ್ತಾಫ್ ಕುರೈಷಿ, ಶೇಕ್ ಅಬು ಮೊಹಮ್ಮದ್, ಶಾಬಾನ್ ಎ.ಎಚ್, ಜಿ.ಸರ್ ದಾರ್, ಮುನಾಫ್ ಕೋಡಿ, ಬಿ.ವೈ ರಿಯಾಝ್ ರನ್ನು ಆಯ್ಕೆ ಮಾಡಲಾಯಿತು.
ಎನ್.ಎಂ.ಎ. ಪಾಲಿಕ್ಲಿನಿಕ್‍ನ ಮುಖ್ಯ ವ್ಯವಸ್ಥಾಪಕರಾಗಿ ಮೊಹಮ್ಮದ್ ತಾಹೀರ್‍ಹಸನ್, ಸದಸ್ಯರಾಗಿ ಅಲ್ತಾಫ್ ಕುರೈಷಿ, ಶಾಬಾನ್ ಎ.ಎಚ್, ಮೊಹಮ್ಮದ್ ಅಲಿ, ಆಸಿಫ್ ಮಸೂದ್‍ರನ್ನು ನೇಮಿಸಲಾಯಿತು.
ಮನ್ಸೂರ್ ಹೆಮ್ಮಾಡಿ ಕಿರಾಅತ್‍ನೊಂದಿಗೆ ಸಭೆ ಪ್ರಾರಂಭವಾಯಿತು. ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕುರೈಷಿ 2018-19ರ ಲೆಕ್ಕಪತ್ರ ಮಂಡಿಸಿದರು. ಕೋಶಾಧಿಕಾರಿ ಅಹಮ್ಮದ್ ಯೂಸೂಫ್ ಮೋನು ಹಳೆ ಕಮಿಟಿಯನ್ನು ಬರ್ಕಸ್ ಮಾಡಿ ಹೊಸ ಕಮಿಟಿ ರಚನೆಗೆ ಅವಕಾಶ ಮಾಡಿಕೊಟ್ಟರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸೌದಿ ಅರೇಬಿಯಾದಿಂದ ಬಂದ ಕೇಂದ್ರ ಸಮಿತಿ ಅಧ್ಯಕ್ಷ ಅಬೂಬಕರ್ ಮೊಹಮ್ಮದ್ ಆಲಿ, ಕಾರ್ಯಾಧ್ಯಕ್ಷ ಎಂ. ಅಬ್ದುಲ್ಲಾ ವಳ್ಚಲ್, ಕೋಶಾಧಿಕಾರಿ ಸುಲೈಮಾನ್ ಗುಲ್ವಾಡಿ ಇವರ ಉಪಸ್ಥಿತಿಯಲ್ಲಿ ಹೊಸ ಕಮಿಟಿಯ ರಚನೆಯಾಯಿತು. ಕಾರ್ಯದರ್ಶಿ ಆಸಿಫ್ ಮಸೂದ್ ಕಾರ್ಯಕ್ರಮ ನಿರ್ವಹಿಸಿದರು. ಹಾಜಿ ಅಬುಶೇಕ್ ಸ್ವಾಗತಿಸಿ, ವಂದಿಸಿದರು.