ಮಂಗಳೂರು: ಉದ್ಯಮಿ, ಹಾಜಿ ಅಬ್ದುಲ್ ರಹೀಂ ಶಾಕೀರ್ ನಿಧನ
Update: 2019-08-30 20:33 IST
ಮಂಗಳೂರು, ಆ.30: ರಿಯಲ್ ಎಸ್ಟೇಟ್ ಉದ್ಯಮಿ, ಬಂದರ್ ನಿವಾಸಿ ಹಾಜಿ ಅಬ್ದುಲ್ ರಹೀಂ ಶಾಕೀರ್ (67) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾದರು.
ಅಬ್ದುಲ್ ರಹೀಂ ಅವರು ಮಂಗಳೂರು ಹಜ್ ಸಮಿತಿಯ ಸದಸ್ಯರಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಝೀನತ್ ಬಕ್ಷ್ ಜುಮಾ ಮಸೀದಿಯ ಖಜಾಂಚಿಯಾಗಿ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ, ಬದ್ರಿಯಾ ಮುಸ್ಲಿಂ ಎಜುಕೇಶನ್ ಟ್ರಸ್ಟ್‌ನ ಸದಸ್ಯರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಗುರುವಾರ ಅಸರ್ ನಮಾಝ್ ಬಳಿಕ ನೆರವೇರಿಸಲಾಯಿತು.