ಅಮೆರಿಕದ ಬಾಹ್ಯಾಕಾಶ ಕಮಾಂಡ್‌ಗೆ ಟ್ರಂಪ್ ಚಾಲನೆ

Update: 2019-08-30 15:44 GMT

ವಾಶಿಂಗ್ಟನ್, ಆ. 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಬಾಹ್ಯಾಕಾಶ ಕಮಾಂಡ್ (ಸ್ಪೇಸ್ ಕಮಾಂಡ್)ನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಮುಂದಿನ ಯುದ್ಧದಲ್ಲಿ ಅದು ಅಮೆರಿಕದ ಮಹತ್ವದ ಹಿತಾಸಕ್ತಿಗಳನ್ನು ರಕ್ಷಿಸಲಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಸಶಸ್ತ್ರ ಪಡೆಗಳ 11ನೇ ಯೂನಿಫೈಡ್ ಕಾಂಬಟ್ಯಾಂಟ್ ಕಮಾಂಡ್ ಆಗಿ ಸ್ಥಾಪನೆಯಾಗಿರುವ ಅಮೆರಿಕ ಬಾಹ್ಯಾಕಾಶ ಕಮಾಂಡ್‌ಗೆ ಜನರಲ್ ಜಾನ್ ಡಬ್ಲು. ರೇಮಂಡ್ ಕಮಾಂಡರ್ ಆಗಿರುತ್ತಾರೆ.

‘‘ಇದು ದೊಡ್ಡ ವಿಷಯವಾಗಿದೆ. ಹೊಸ ಯುದ್ಧ ಕಮಾಂಡ್ ಆಗಿ ‘ಸ್ಪೇಸ್‌ಕಾಮ್’ ಮುಂದಿನ ಯುದ್ಧದಲ್ಲಿ ಬಾಹ್ಯಾಕಾಶದಲ್ಲಿ ಅಮೆರಿಕದ ಮಹತ್ವದ ಹಿತಾಸಕ್ತಿಗಳನ್ನು ರಕ್ಷಿಸಲಿದೆ’’ ಎಂದು ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

ರಶ್ಯ ಮತ್ತು ಚೀನಾಗಳನ್ನು ಬಾಹ್ಯಾಕಾಶದಲ್ಲಿ ಅಮೆರಿಕಕ್ಕೆ ಬೆದರಿಕೆ ಒಡ್ಡಬಲ್ಲ ದೇಶಗಳು ಎಂಬುದಾಗಿ ಟ್ರಂಪ್ ಆಡಳಿತ ಗುರುತಿಸಿದೆ.

‘‘ಈಗ, ಅಮೆರಿಕಕ್ಕೆ ಹಾನಿ ಮಾಡಲು ಬಯಸುವವರು ಹಾಗೂ ಅತ್ಯಂತ ಎತ್ತರದಲ್ಲಿ, ಬಾಹ್ಯಾಕಾಶದಲ್ಲಿ ನಮಗೆ ಸವಾಲು ಹಾಕುವವರಿಗೆ, ಇದು ಸಂಪೂರ್ಣ ಭಿನ್ನ ಆಟವಾಗಿರುತ್ತದೆ’’ ಎಂದು ಟ್ರಂಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News