ಆರೆಸ್ಸೆಸ್ ಶಾಖೆಗಳಲ್ಲಿ ತರಬೇತಿಯಿಂದ ಮಾನಸಿಕ, ದೈಹಿಕ ಕ್ಷಮತೆ ಹೆಚ್ಚಳ: ಗೋಯಲ್

Update: 2019-08-30 16:36 GMT

ಹೊಸದಿಲ್ಲಿ, ಆ.30: ಆರೆಸ್ಸೆಸ್ ಶಾಖೆಗಳಲ್ಲಿ ತರಬೇತಿ ಪಡೆಯುವುದರಿಂದ ಖಾಸಗಿ ಭದ್ರತಾ ಸಿಬ್ಬಂದಿಯ ಮಾನಸಿಕ ತ್ತು ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ರೈಲ್ವೇ ಸಚಿವ ಪಿಯೂಶ್ ಗೋಯಲ್ ಶುಕ್ರವಾರ ಅಭಿಪ್ರಾಯಿಸಿದ್ದಾರೆ.

ಖಾಸಗಿ ಭದ್ರತಾ ಸಿಬ್ಬಂದಿ ಕೈಗಾರಿಕೆ ಘಟಿಕೋತ್ಸವ-2019ನಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ಗೋಯಲ್, ಎಪ್ರಿಲ್-ಮೇಯಲ್ಲಿ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಲಕ್ಷಾಂತರ ಜನರು ದೇಶದ ಚೌಕಿದಾರ್ (ಕಾವಲುಗಾರ)ಗಳಾದರು ಮತ್ತು ಅದೇ ಮೊದಲ ಬಾರಿ ಸಶಸ್ತ್ರಪಡೆಗಳು ಮತ್ತು ಪೊಲೀಸರಿಗಷ್ಟೇ ಮೀಸಲಾಗಿದ್ದ ಘನತೆಯನ್ನು ಖಾಸಗಿ ಭದ್ರತಾ ಸಿಬ್ಬಂದಿಗೂ ನೀಡಲಾಯಿತು ಎಂದು ತಿಳಿಸಿದ್ದಾರೆ.

ತರಬೇತಿಯನ್ನು ದೊಡ್ಡ ಮಟ್ಟದಲ್ಲಿ ನೋಡಿ. ಆರೆಸ್ಸೆಸ್ ನಲ್ಲಿ ನಾವು ಪಡೆಯುವ ತರಬೇತಿ ಇಲ್ಲಿರುವ ಕೆಲವು ಖಾಸಗಿ ಭದ್ರತಾ ಸಿಬ್ಬಂದಿ ಪಡೆಯುವ ತರಬೇತಿಗಿಂತ ಅದೆಷ್ಟೋ ಉತ್ತಮವಾಗಿದೆ ಎಂದು ನನಗನಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಈ ತರಬೇತಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನೀವು ಮಾಡುವ ಕೆಲಸಕ್ಕೆ ತರಬೇತಿ ಎನ್ನುವುದು ಅತ್ಯಂತ ಮುಖ್ಯವಾದ ವಿಷಯ ಎಂದು ಹೇಳಲಷ್ಟೇ ನಾನು ಬಯಸುತ್ತೇನೆ ಎಂದು ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News