ಎಸ್.ಟಿ. ಪ್ರತಿಪಾದನೆ ನಿರಾಕರಿಸಿದ ಪರಿಶೀಲನಾ ಸಮಿತಿ: ಅಜಿತ್ ಜೋಗಿ ವಿರುದ್ಧ ಎಫ್‌ಐಆರ್ ದಾಖಲು

Update: 2019-08-30 16:39 GMT

ರಾಯ್‌ಪುರ, ಆ. 30: ತಾನು ಪರಿಶಿಷ್ಠ ಪಂಗಡಕ್ಕೆ ಸೇರಿದವನು ಎಂಬ ಪ್ರತಿಪಾದನೆಯನ್ನು ಸರಕಾರ ನಿಯೋಜಿತ ಸಮಿತಿ ತಿರಸ್ಕರಿಸಿದ ದಿನಗಳ ಬಳಿಕ ಚತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ವಿರುದ್ಧ ಬಿಲಾಸ್ಪುರ ಜಿಲ್ಲೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನು ಎಂಬ ಅಜಿತ್ ಜೋಗಿ ಅವರ ಪ್ರತಿಪಾದನೆಯನ್ನು ಸರಕಾರ ರೂಪಿಸಿದ ಉನ್ನತ ಮಟ್ಟದ ಜಾತಿ ಪರಿಶೀಲನಾ ಸಮಿತಿ ಕಳೆದ ವಾರ ತಿರಸ್ಕರಿಸಿತ್ತು ಹಾಗೂ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು.

 ಈ ನಡುವೆ, ಚತ್ತೀಸ್‌ಗಢದ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಅಜಿತ್ ಜೋಗಿ ವಿರುದ್ಧ ನಕಲಿ ಪ್ರಮಾಣ ಪತ್ರ ಪಡೆದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯ ಪರವಾಗಿ ಬಿಲಾಸ್‌ಪುರದ ತಹಶೀಲ್ದಾರ ಟಿ.ಆರ್. ಭಾರದ್ವಾಜ್ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಜೋಗಿ ಅವರ ಜಾತಿ ಪ್ರಮಾಣ ಪತ್ರವನ್ನು ಪರಿಶೀಲನಾ ಸಮಿತಿ ತನ್ನ ಆಗಸ್ಟ್ 23ರ ದಿನಾಂಕದ ಆದೇಶದಲ್ಲಿ ರದ್ದುಗೊಳಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ ಎಂದು ಬಿಲಾಸ್‌ಪುರ ಪೊಲೀಸ್ ಅಧೀಕ್ಷಕ ಪ್ರಶಾಂತ್ ಅಗರ್ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News