×
Ad

ಉದ್ಯಾವರ: 25ನೇ ವರ್ಷದ ಗಣೇಶೋತ್ಸವ

Update: 2019-08-30 22:14 IST

ಉಡುಪಿ, ಆ.30: ಉದ್ಯಾವರ ಸಂಪಿಗೆನಗರ ಆರೂರುತೋಟ ಫ್ರೆಂಡ್ಸ್ ಗಾರ್ಡನ್ ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿ ಈ ಬಾರಿ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಿದೆ ಎಂದು ರಜತಮಹೋತ್ಸವ ಸಮಿತಿಯ ಅಧ್ಯಕ್ಷ ಯೋಗೀಶ್ ಎಸ್.ಕೋಟ್ಯಾನ್ ತಿಳಿಸಿದ್ದಾರೆ.

ಶುಕ್ರವಾರ ಉಡುಪಿಯಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕಾರ್ಯಕ್ರಮಗಳು ಸೆ.2ರಿಂದ 4ರವರೆಗೆ ಮೂರು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುತ್ತಿದೆ. ಇದರಲ್ಲಿ ಆರೋಗ್ಯ ಶಿಬಿರ, ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ, ಯಕ್ಷಗಾನ, ನಾಟಕಗಳು ನಡೆಯಲಿವೆ ಎಂದರು.

ಅಲ್ಲದೇ ಹಸಿರೇ ಉಸಿರು ಎಂಬ ಕಾರ್ಯಕ್ರಮದಡಿ, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಈ ಬಾರಿ ನಡೆಸ ಲಾಗುವುದು. ಪರಿಸರದ ಸುತ್ತಮುತ್ತ ವಿವಿಧ ಜಾತಿಯ 108 ಗಿಡಗಳನ್ನು ನೆಟ್ಟು ಹಸಿರಾಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಕೋಟ್ಯಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಹರೀಶ್ ಕುಮಾರ್ ಉದ್ಯಾವರ, ಯು.ಪ್ರಭಾಕರ ಗಾಣಿಗ, ಸುಧಾಕರ ಕೋಟ್ಯಾನ್, ಪ್ರದೀಪ್ ಸುವರ್ಣ, ದಿನೇಶ್ ಜತ್ತನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News