ಡಾ.ವಿನೋದಕುಮಾರ್‌ಗೆ ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ
Update: 2019-08-30 22:19 IST
ಮಂಗಳೂರು, ಆ.30: ಪ್ರಸಕ್ತ ಗ್ಲೋಬಲ್ ಬಿಸಿನೆಸ್ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಡಾ.ವಿನೋದಕುಮಾರ್‌ಗೆ 2019-20ನೇ ಸಾಲಿನ ವೈಯಕ್ತಿಕ ಆರ್ಥಿಕ ಬೆಳವಣಿಗೆಗೆ ನೀಡುವ ‘ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ದಿಲ್ಲಿಯ ಎಕನಾಮಿಕ್ ಗ್ರೋತ್ ಸೊಸೈಟಿ ಆಫ್ ಇಂಡಿಯಾ ಕೊಡಲ್ಪಡುವ ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿಯನ್ನು ಇತ್ತೀಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಪ್ರದಾನ ಮಾಡಲಾಯಿತು.
ಡಾ.ವಿನೋದಕುಮಾರ್ ನೇತೃತ್ವದಲ್ಲಿ ನಡೆಯುವ ಗ್ಲೋಬಲ್ ಬಿಸಿನೆಸ್ ಗ್ರೂಪ್ ಸಂಸ್ಥೆಯ ಆರ್ಥಿಕ ಬೆಳವಣಿಗೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಗೋವಾ ವಿಧಾನಸಭೆಯ ಸ್ಪೀಕರ್ ಅನಂತ ವಿ. ಶೇಟ್, ವಿಜಯ್ ಪೋಲ್ ಸರ್ಪಂಚ್, ವಿ.ಪಿ. ಮಾಯೆಮ್ಮ್ ಮಾಯೆಮಾರ್, ಎಂಎಸ್‌ಎಂಇ ಅಧ್ಯಕ್ಷ ಮಂಗುರೀಶ್, ಯುಕೆಯ ಜಾಗತಿಕ ಪರಿಸರ ನಿರ್ವಹಣಾ ಸಮಿತಿ ಅಧ್ಯಕ್ಷ ಗ್ಯಾರಿ ಡಿಲಾ ಫೂಮೆರಾಯಿ, ಸಿಬಿಐನ ಮಾಜಿ ನಿರ್ದೇಶಕ ವಿ.ಎನ್. ಸೇಗಲ್ ಮತ್ತಿತರು ಉಪಸ್ಥಿತರಿದ್ದರು.