ಕಾಶ್ಮೀರ ಕಣಿವೆಯಲ್ಲಿ ಮತ್ತೆ ನಿರ್ಬಂಧ ಜಾರಿ

Update: 2019-08-30 16:50 GMT

ಶ್ರೀನಗರ, ಆ. 30: ಶುಕ್ರವಾರದ ಸಭೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀನಗರ ಹಾಗೂ ಕಾಶ್ಮೀರ ಕಣಿವೆಯ ವಿವಿಧ ಭಾಗಗಳಲ್ಲಿ ಹೊಸ ನಿರ್ಬಂಧ ಹೇರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಾಜ್ಞೆ ವಿಧಿಸಲಾಗಿದ್ದು, ಗುಂಪು ಸೇರದಂತೆ ಘೋಷಿಸಲಾಗಿತ್ತು. ಅಲ್ಲದೆ, ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ಕೇಂದ್ರ ಸರಕಾರ 370 ವಿಧಿ ರದ್ದುಗೊಳಿಸಿದ ಬಳಿಕ ಆಗಸ್ಟ್ 5ರಿಂದ ಸ್ಥಗಿತಗೊಂಡ ಮೊಬೈಲ್ ಟೆಲಿಫೋನ್ ಸೇವೆ ಹಾಗೂ ಎಲ್ಲ ಅಂತರ್ಜಾಲ ಸೇವೆಗಳು ಇದುವರೆಗೆ ಆರಂಭವಾಗಿಲ್ಲ. ಆದರೆ, ಕಣಿವೆಯ ವಿವಿಧ ಭಾಗಗಳಲ್ಲಿ ಲ್ಯಾಂಡ್ ಲೈನ್ ಟೆಲಿಫೋನ್ ಸೇವೆ ಪುನರಾರಂಭಗೊಂಡಿವೆ.

ಹೆಚ್ಚಿನ ಉನ್ನತ ಮಟ್ಟದ ನಾಯಕರು ಹಾಗೂ ಪ್ರತ್ಯೇಕತಾವಾದಿ ರಾಜಕಾರಣಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News