×
Ad

ಸಹ್ಯಾದ್ರಿಯಲ್ಲಿ ‘ಫಿಟ್ ಇಂಡಿಯಾ ವಾಕಥಾನ್’

Update: 2019-08-30 22:20 IST

ಮಂಗಳೂರು, ಆ.30: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯು ಪ್ರಧಾನಮಂತ್ರಿ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಸಂದರ್ಭ ಆರಂಭಿಸಿದ ‘ಫಿಟ್ ಇಂಡಿಯಾ ವಾಕಥಾನ್’ ಅಭಿಯಾನದಲ್ಲಿ ಪಾಲ್ಗೊಂಡು, ‘ನಮ್ಮನ್ನು ನಾವು ಸದೃಢ ಹಾಗೂ ಫಿಟ್ ಆಗಿರಿಸಿಕೊಳ್ಳುತ್ತೇವೆ’ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸಹ್ಯಾದ್ರಿ ಎನ್ನೆಸ್ಸೆಸ್ ಘಟಕವು ದೈಹಿಕ ಶಿಕ್ಷಣ ಇಲಾಖೆ ಮತ್ತು ಸಹ್ಯಾದ್ರಿ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಪ್ರಧಾನಿಯವರ ಫಿಟ್ ಇಂಡಿಯಾ ವಾಕಥಾನ್ ನಡೆಸಲಾಯಿತು. ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸ ರಾವ್ ಕುಂಟೆ ವಾಕಥಾನ್‌ಗೆ ನಿಶಾನೆ ತೋರಿಸಿ, ಆರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 10,000 ಹೆಜ್ಜೆಗಳ ಸವಾಲು ನಡೆಯಿತು. ಶಿಕ್ಷಕ ವರ್ಗ ಮತ್ತು ಸಿಬ್ಬಂದಿ ಕ್ಯಾಂಪಸ್ ಸುತ್ತಲೂ ಮೂರು ಸುತ್ತಿನ ನಡಿಗೆ ಹಾಕಿದರು. ಭಾರೀ ಮಳೆಯ ನಡುವೆಯೂ ಅಧ್ಯಾಪಕರು ನಡಿಗೆ ಮುಂದುವರಿಸಿ ಪೂರ್ಣಗೊಳಿಸಿದರು.

ವಾಕಥಾನ್ ವಿಜೇತರು: ಪುರುಷ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಐಎಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಿತೇಶ್ ಪಕ್ಕಲಾ, ಕ್ಯಾಂಪಸ್ ಸೆಕ್ಯುರಿಟಿ ಉಸ್ತುವಾರಿ ಶ್ರೀಕಾಂತ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದರು.

ಮಹಿಳಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಪ್ರಥಮ ಸ್ಥಾನ ಪಡೆದರು. ಅಶ್ವಿತಾ ಮತ್ತು ಸೌಮ್ಯಾ ದ್ವಿತೀಯ ಸ್ಥಾನ ಹಂಚಿಕೊಂಡರು.
ಹಿರಿಯ ವಿಭಾಗದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಹೇಮಂತ್ ಪ್ರಭು ಪ್ರಶಸ್ತಿ ಪಡೆದರು. ಪ್ರಥಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಶ್ರೇಯಸ್ ಕೆ.ಎಂ. 19,726 ಹೆಜ್ಜೆಗಳನ್ನು ಹಾಕಿ 10,000 ಹೆಜ್ಜೆಗಳ ಸವಾಲು ಹಿಂದೆ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News