ಸುರತ್ಕಲ್: ಎಂಆರ್‌ಪಿಎಲ್ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮಂಗಳೂರು, ಆ.30: ಎಂಆರ್‌ಪಿಎಲ್-ಒಎನ್‌ಜಿಸಿ ಡಿಸ್‌ಪ್ಲೇಸ್ಡ್ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವು ಎಂಆರ್‌ಪಿಎಲ್ ಎಂಪ್ಲಾಯೀಸ್ ರಿಕ್ರಿಯೇಶನ್ ಕ್ಲಬ್ ಸೆಂಟರ್‌ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಂ.ವೆಂಕಟೇಶ್, ಎಂಆರ್‌ಪಿಎಲ್-ಒಎನ್‌ಜಿಸಿನಂತಹ ಬೃಹತ್ ಸಂಸ್ಥೆಯ ಅಭಿವೃದ್ಧಿಗೆ ಕಾರಣಕರ್ತರಾದ ಸರ್ವರಿಗೂ ವಂದಿಸಿದರು. ಅಭಿವೃದ್ಧಿಗೆ ಆತ್ಮಸ್ಥೈರ್ಯ ಹಾಗೂ ಧೈರ್ಯವನ್ನು ಬಳಸಿ ಮುನ್ನಡೆಯೋಣ ಎಂದರು.
ಮುಖ್ಯಅತಿಥಿಯಾಗಿ ರಾಜೀವ್ ಕುಶ್ವಾರ್, ಡಾ.ಜ್ಯೋತಿ ಕರ್ಮರನ್, ರವಿಪ್ರಸಾದ್ ಎಸ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್ ವಾದನದಲ್ಲಿ ಗೌರವ ಡಾಕ್ಟರೇಟ್ ಪಡೆದ ಮೋಹನ್ ಜೋಗಿ ಕಳವಾರು ಹಾಗೂ ಸಾಂಸ್ಕೃತಿಕ ರಾಯಭಾರಿ ತಂಡದೊಂದಿಗೆ ಚೀನಾಕ್ಕೆ ಭೇಟಿಕೊಟ್ಟ ಯಕ್ಷಗಾನ ಕಲಾವಿದೆ ದೀಕ್ಷಾ ಎಂ. ಶೆಟ್ಟಿ ಮತ್ತೆ ನಿರ್ವಸಿತ ಉದ್ಯೋಗಿ ರಮೇಶ್ ದೇವಾಡಿಗ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯ 27ನೇ ನುಡಿ ಹಬ್ಬದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಡಾ. ಜ್ಯೋತಿ ಚೇಳಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸದಸ್ಯರಾದ ಜಯಲಕ್ಷ್ಮೀ, ರಘುರಾಮ ತಂತ್ರಿ, ಜಯೇಶ್ ಗೋವಿಂದ್, ಗುರುರಾಜ್ ರಾವ್, ದಿನೇಶ್ ಶೆಟ್ಟಿ, ಪ್ರಕಾಶ್ ಬಾಳ, ದಾಮೋದರ್ ಶೆಟ್ಟಿ, ಹರೀಶ್ ಬಂಗೇರ, ಕಿರಣ್, ಶಿವಾನಂದ, ಜಯ, ಜಯಪ್ರಕಾಶ್ ಅಮೀನ್, ಸ್ಮಿತಾ, ಉಮೇಶ್, ಸುಂದರ ಬಂಗೇರ, ಸುನೀಲ್, ಶಿವಪ್ರಸಾದ್, ವಸುಧಾ, ಸೋಮಶೇಖರ, ದಿನೇಶ್, ಹರಿಕೃಷ್ಣ ಭಟ್, ಶಬರಿ, ಕುಮಾರ್, ಮಹೇಶ್ ಶೆಟ್ಟಿ, ದುರ್ಗಾ ಪ್ರಸಾದ್, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ರವಿ ಗುಜರನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್ ಅಂಚನ್ ವರದಿ ವಾಚಿಸಿದರು. ದೀಕ್ಷಿತಾ ರಾಕೇಶ್ ಜೋಗಿ ಮತ್ತು ಚೇತನ್ ಡಿ. ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ವಂದಿಸಿದರು.