ಆಳ್ವಾಸ್‍ನಲ್ಲಿ ‘ತುಳು ರಂಗ್’ ಸಂಭ್ರಮ
ಮೂಡುಬಿದಿರೆ: ಎಲ್ಲಿ ತುಳುವರು ಇದ್ದಾರೋ ಅಲ್ಲಿ ತುಳು ಸಂಸ್ಕøತಿ ಆಚರಣೆಯಲ್ಲಿದೆ ಎಂದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಅಧ್ಯಯನ ಕೇಂದ್ರ ಆಯೋಜಿಸಲಾಗಿದ್ದ “ಸಂಸ್ಕೃತಿದ ಒರಿಪು ಬುಳೆಚ್ಚಿಲ್ ಗಾದ್” ಎಂಬ ಉದ್ದೇಶವನ್ನು ಇಟ್ಟುಕೊಂಡು ನಡೆದ ತುಳು ರಂಗ್ 2019 ಕಾರ್ಯಕ್ರಮವನ್ನು ಮೊಸರು ಕಡಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ನಾಡಿನಲ್ಲಿ ಬೇರೆ ಬೇರೆ ಬಾಷೆಯ ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿದ್ದು, ತುಳು ಸಾಹಿತ್ಯ ಅಕಾಡೆಮಿ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು, ಬಾಷೆ ಹಾಗೂ ಸಂಸ್ಕøತಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು. ತುಳುವರು ತಮ್ಮ ಸಂಸ್ಕøತಿ ಮತ್ತು ಆಚರಣೆಯನ್ನು ಮುಂದುವರಿಸಿದರೆ ಮಾತ್ರ ಭಾಷೆಯ ಬೆಳವಣಿಗೆ ಸಾದ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್ ಮಾತನಾಡಿ ಯಾವ ದೇಶದಲ್ಲಿ ವೈವಿಧ್ಯವಾದ ಭಾಷೆ ಇರುತ್ತದೆಯೋ ಆ ದೇಶದಲ್ಲಿ ಬಹುರೂಪದ ಸಂಸ್ಕøತಿ ಅನಾವರಣಗೊಳ್ಳುತ್ತದೆ. ಪ್ರತಿ ಭಾಷೆಗೂ ಅದರದೆ ಆದ ಮಹತ್ವವಿದ್ದು, ಆ ಮೂಲಕ ವಿಭಿನ್ನ ಆಲೋಚನೆಗಳು ಸಮಾಜದಲ್ಲಿ ಮೂಡಿ ಬರಲು ಅನುವು ಮಾಡಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಪ್ರೋ. ಬಾಲಕೃಷ್ಣ ಶೆಟ್ಟಿ, ಸಂಯೋಜಕರಾದ ಡಾ. ಯೋಗಿಶ್ ಕೈರೋಡಿ ಮತ್ತು ವಿದ್ಯಾರ್ಥಿ ಸಂಯೋಜಕರಾದ ಹರ್ಷಿತಾ ಕೋಟ್ಯಾನ್, ಆದರ್ಶ ಜೈನ್ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮವನ್ನು ಸೌಮ್ಯ ನಿರೂಪಿಸಿದರು, ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರಜ್ಞಾ ವಂದಿಸಿದರು.