ಕಾರ್ಕಳ: ಕ್ರೈಸ್‍ಕಿಂಗ್ ಆಂಗ್ಲಮಾಧ್ಯಮ ಶಾಲೆಗೆ “ಸೆಗ್ರ್ ಆವಾರ್ಡ್”

Update: 2019-08-30 17:33 GMT

ಕಾರ್ಕಳ: ಕಾರ್ಕಳದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ  ಕ್ರೈಸ್‍ಕಿಂಗ್ ಆಂಗ್ಲ ಮಾಧ್ಯಮ ಶಾಲೆಗೆ ಮಹಾರಾಷ್ಟ್ರದ ಪುಣೆಯ ಸೆಂಟರ್ ಫಾರ್ ಎಜ್ಯುಕೇಶನ್ ಗ್ರೋಥ್  ಆ್ಯಂಡ್ ರಿಸರ್ಚ್ ಸಂಸ್ಥೆ ನೀಡುವ “ಬೆಸ್ಟ್ ಸ್ಕೂಲ್ ಇನ್ ಕರ್ನಾಟಕ ಫಾರ್ ಟೀಚಿಂಗ್ 2019” ಸೆಗ್ರ್ ಆವಾರ್ಡ್‍ನ್ನು ನೀಡಿ ಗೌರವಿಸಿದೆ.

ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯ ಕಲ್ಯಾಣಿನಗರದಲ್ಲಿ ನಡೆದ 5ನೇ “ಹೈಯರ್ ಎಜ್ಯುಕೇಶನ್ ಸಮ್ಮಿತ್”ನಲ್ಲಿ ವರ್ಷದ ಆತ್ಯುತ್ತಮ ಶಿಕ್ಷಣ, ಶಿಕ್ಷಣದ ಗುಣಮಟ್ಟ ಅಭಿವೃದ್ಧಿ, ಶೈಕ್ಷಣಿಕ ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನೆಗಾಗಿ ರಾಜ್ಯ ಮಟ್ಟದ ಈ ಗೌರವ ಸಂದಿದ್ದು, ಎಐಸಿಟಿಇ ಚೇರ್‍ಮೆನ್ ಪ್ರೊ. ಅನಿಲ್.ಡಿ ಶಾಶ್ರಬುದ್ಧಿ ರವರು ಸಂಸ್ಥೆಯ ಕಾರ್ಯದರ್ಶಿ ಅವೆಲಿನ್ ಲೂಯಿಸ್ ಹಾಗೂ ಮ್ಯಾನೆಜಿಂಗ್ ಟ್ರಸ್ಟಿ ವಾಲ್ಟರ್ ಡಿಸೋಜಾ ರವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಲೇಶ್ಯಾದ ಲಿಂಕನ್ ಯುನಿವರ್ಸಿಟಿಯ ವೈಸ್‍ಛಾನ್ಸಲರ್ ಪ್ರೊ. ಅಮಿಯಾ ಚೌಮಿಕ್, ಸೆಗ್ರ್ ರಾಷ್ಟ್ರೀಯ ಅಧ್ಯಕ್ಷ, ಎ.ಐ.ಸಿ.ಟಿ.ಇ ಮೆಂಬರ್ ಸೆಕ್ರೆಟರಿ  ಪ್ರೊ ಎ.ಪಿ. ಮಿತ್ತಲ್, ರಿಜನಲ್ ಆಫೀಸರ್ ಡಾ. ಸಿ.ಎಸ್. ವರ್ಮಾ, ಎಲ್.ಎನ್.ಸಿ.ಟಿ ಯುನಿವರ್ಸಿಟಿ ವೈಸ್ ಛಾನ್ಸಲರ್  ಡಾ. ಎನ್.ಕೆ. ಥಾಪರ್, ಸೆಗ್ರೆನೆ ಹಿರಿಯ ಉಪಾಧ್ಯಕ್ಷ, ಸಂಜೀವ ಗೋಸ್ವಾಮಿ, ನಿರ್ದೇಶಕ ರವೀಶ್ ರೋಶನ್ ಮುಂತಾದವರು ಉಪಸ್ಥಿತಿದ್ದರು.

ಈ ಹಿಂದೆ ಈ ಸಂಸ್ಥೆಗೆ 2018ರಲ್ಲಿ ಟಿ.ಎನ್.ವಿ.ಯು.ಕೆ ಲಿಮಿಟೆಡ್ ನೀಡುವ “ಐಎಓ ಆವಾರ್ಡ್” 2016ರಲ್ಲಿ ಏಶಿಯಾ ಎಜ್ಯುಕೇಶನ್ ಸಮಿತ್  ಆ್ಯಂಡ್ ಅವಾರ್ಡ್ ನೀಡುವ ಬೆಸ್ಟ್ ಪಬ್ಲಿಕ್ ಸ್ಕೂಲ್ ಇನ್ ಕರ್ನಾಟಕ ಆವಾರ್ಡ್ ಕೂಡ ಸಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News