ಉಡುಪಿ : ಆ.31ರಂದು 'ಅಶೀರನ ಕವನಗಳು' ಪುಸ್ತಕ ಬಿಡುಗಡೆ
Update: 2019-08-30 23:37 IST
ಉಡುಪಿ : ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಬೆಂಗಳೂರು ಇದರ ವತಿಯಿಂದ ಉದಯೋನ್ಮುಕ ಕವಿ ಎಂ ಆಶೀರುದ್ದೀನ್ ಮಂಜನಾಡಿ ಅವರ ಚೊಚ್ಚಲ ಕವನ ಸಂಕಲನ “ಆಶೀರನ ಕವನಗಳು” ಆ.31ರಂದು ಸಂಜೆ 5-30 ಕ್ಕೆ ಉಡುಪಿಯ ದುರ್ಗಾ ಇಂಟರ್ ನ್ಯಾಶನಲ್ ಹಾಲ್ ನಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಇದರ ಅಧ್ಯಕ್ಷರಾದ ಕಿದಿಯೂರು ನಿಹಾಲ್ ಸಾಹೇಬ್ ವಹಿಸಲಿದ್ದಾರೆ.
ಕವನ ಸಂಕಲನವನ್ನು ಮಂಗಳೂರಿನ ಖ್ಯಾತ ವೈದ್ಯರು ಮತ್ತು ಬರಹಗಾರರು ಆದ ಡಾ. ಸುರೇಶ್ ನೆಗಳಗುಳಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸೌರಭ ಪ್ರಕಾಶನದ ನಿರ್ದೇಶಕರು ಕವಿಗಳು ಆದ ಜಿ ಎಂ ಶರೀಫ್ ಹೂಡೆ ಆಗಮಿಸಲಿದ್ದಾರೆ.