ಬಿಎಸ್ಎಫ್ ಮಹಾನಿರ್ದೇಶಕರಾಗಿ ಜೊಹ್ರಿ ಅಧಿಕಾರ ಸ್ವೀಕಾರ
Update: 2019-08-31 14:30 IST
ಹೊಸದಿಲ್ಲಿ, ಆ. 31: ಬಿಎಸ್ಎಫ್ (ಗಡಿ ಭದ್ರತಾ ಪಡೆ) ಮಹಾನಿರ್ದೇಶಕರಾಗಿ ವಿವೇಕ್ ಕುಮಾರ್ ಜೊಹ್ರಿ ಶನಿವಾರ ಅಧಿಕಾರ ವಹಿಸಿಕೊಂಡರು. ಅವರು ಗಡಿ ಭದ್ರತಾ ಪಡೆಯ 25 ನೇ ಮುಖ್ಯಸ್ಥರಾಗಿದ್ದಾರೆ.
ಮಧ್ಯಪ್ರದೇಶದ ಕೇಡರ್ನ 1984 ಬ್ಯಾಚ್ ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿರುವ ಜೊಹ್ರಿ ಕ್ಯಾಬಿನೆಟ್ ಸಚಿವಾಲಯದ ಅಧೀನದಲ್ಲಿರುವ ಬಾಹ್ಯ ಗುಪ್ತಚರ ಸಂಸ್ಥೆ ರಾದಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇಂದು ನಿವೃತ್ತರಾಗುವ ರಜನಿ ಕಾಂತಿ ಮಿಶ್ರಾ ಅವರು ಜೋಹ್ರಿಗೆ ಅಧಿಕಾರ ಹಸ್ತಾಂತರಿಸಿದರು. 2020 ರ ಸೆಪ್ಟೆಂಬರ್ ತನಕ ಜೊಹ್ರಿ ಅಧಿಕಾರದಲ್ಲಿರುತ್ತಾರೆ.